
ಬಾಲಿವುಡ್ ನಟಿ ಪೂಜಾ ಬೇಡಿ ತಮ್ಮ ಹಾಲಿಡೇ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಬಳಿಕ ಟ್ರೋಲ್‌ಗೆ ಒಳಗಾಗಿದ್ದಾರೆ.
ಇತ್ತೀಚೆಗೆ ಮಾನೆಕ್ ಕಂಟ್ರಾಕ್ಟರ್ ಅವರೊಂದಿಗೆ ಎಂಗೇಜ್ ಆದ ಪೂಜಾಬೇಡಿ, ಕೊರೋನ ಸಾಂಕ್ರಾಮಿಕದ ಎರಡನೇ ಅಲೆಯ ನಡುವೆಯೂ ಗೋವಾಕ್ಕೆ ಹಾಲಿಡೇಸ್ ಕಳೆಯಲು ತೆರಳಿದ್ದರು.
ನಕಲಿ ರೆಮ್ ಡೆಸಿವಿರ್ ಇಂಜೆಕ್ಷನ್ ಮಾರುತ್ತಿದ್ದ ನಾಲ್ವರು ಅರೆಸ್ಟ್
ಗೋವಾದಲ್ಲಿ ತಮ್ಮ ಸ್ನೇಹಿತರೊಂದಿಗೆ ದೋಣಿ ವಿಹಾರ ನಡೆಸಿದ ಪೂಜಾ ಬೇಡಿ, ಅಲ್ಲಿನ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಭಯ ಬೇಡ ಎಂದು ಪಾಠ ಮಾಡಿದ್ದಾರೆ.
ಆದರೆ ಮಾಸ್ಕ್ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡ ಪೂಜಾರನ್ನು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ನೀವೊಬ್ಬ ಸೆಲಬ್ರಿಟಿಯಾಗಿ ಹೀಗೆ ಮಾಡುವುದು ಸರಿಯಲ್ಲ ಎಂದು ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ.