ಮಂಗಳೂರು:ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಗೆ ವಿಜ್ಞಾನಿಗಳು ಹೊಸ, ಹೊಸ ವಿಧಾನ ಸಂಶೋಧಿಸುತ್ತಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯದ ಮೂಲಕ ಕರ್ನಾಟಕದ ಮೊದಲ ಮನೆಯೊಂದು ಈಗ ಮಂಗಳೂರಿನಲ್ಲಿ ನಿರ್ಮಾಣವಾಗಿದೆ.
ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಶನ್ ಮಂಗಳೂರಿನ ಪಚಂಡಿಯಲ್ಲಿ 1500 ಕಿಗ್ರಾಂ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಮನೆಯೊಂದನ್ನು ನಿರ್ಮಾಣ ಮಾಡಿದೆ. ಅದರಲ್ಲಿ ತಲಾ 25 ಕೆಜಿ ತೂಕದ 60 ಕ್ಕೂ ಅಧಿಕ ಫಲಕಗಳು ಪ್ಲಾಸ್ಟಿಕ್ ನಿಂದ ಕೂಡಿವೆ.
ಅತ್ಯಂತ ಕಡಿಮೆ ಖರ್ಚು ಎಂದರೆ 4.5 ಲಕ್ಷ ರೂ. ವೆಚ್ಚದಲ್ಲಿ ಈ ಮನೆ ನಿರ್ಮಿಸಲಾಗಿದ್ದು, ಇನ್ನೂ 20 ಮನೆಗಳ ನಿರ್ಮಾಣಕ್ಕೆ ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಶನ್ ಮುಂದಾಗಿದೆ ಎಂದು ಸಂಸ್ಥೆಯ ಶಿಫ್ರಶ್ ಜಾಕೊಬ್ಸ್ ತಿಳಿಸಿದ್ದಾರೆ. ಮನೆಗಳ ನಿರ್ಮಾಣಕ್ಕೂ ಮುಂಚೆ ಬಾಳಿಕೆ ಪರೀಕ್ಷೆಯನ್ನೂ ಮಾಡಲಾಗಿದೆ ಎಂದಿದ್ದಾರೆ.