alex Certify ಖಾಸಗಿ ಕ್ಷಣದ ಫೋಟೋ: ಪ್ರಿಯಕರನ ವಿಚಾರಣೆಯಲ್ಲಿ ಬಯಲಾಯ್ತು ಯುವತಿಯ ಅಸಲಿಯತ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ಕ್ಷಣದ ಫೋಟೋ: ಪ್ರಿಯಕರನ ವಿಚಾರಣೆಯಲ್ಲಿ ಬಯಲಾಯ್ತು ಯುವತಿಯ ಅಸಲಿಯತ್ತು

ಬೆಂಗಳೂರು: ಪ್ರೀತಿಸಿದ ಯುವಕನಿಂದ ದೂರವಾದ ಯುವತಿ ಆತನನ್ನು ಸಂಕಷ್ಟಕ್ಕೆ ಸಿಲುಕಿಸುವ ಉದ್ದೇಶದಿಂದ ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದು ತಾನೇ ದೂರು ನೀಡಿ ಬಣ್ಣ ಬಯಲು ಮಾಡಿಕೊಂಡಿದ್ದಾಳೆ.

ಉತ್ತರ ಭಾರತ ಮೂಲದ 27 ವರ್ಷದ ಯುವತಿ ತನ್ನ ಖಾಸಗಿ ಫೋಟೋಗಳನ್ನು ಫೇಸ್ಬುಕ್ನಲ್ಲಿ ಹರಿಬಿಡುವುದಾಗಿ  ಪ್ರಿಯಕರ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಪರಿಹಾರ ಕೌಟುಂಬಿಕ ಸಲಹಾ ಕೇಂದ್ರಕ್ಕೆ ದೂರು ನೀಡಿದ್ದಾಳೆ. ಪರಿಹಾರ ಸಲಹಾ ಕೇಂದ್ರದ ಸಿಬ್ಬಂದಿ ದೂರು ದಾಖಲಿಸಿಕೊಂಡು ಯುವಕನನ್ನು ಕರೆಸಿ ವಿಚಾರಣೆ ನಡೆಸಿದಾಗ ಯುವತಿಯ ಬಣ್ಣ ಬಯಲಾಗಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಪಿಜಿಯಲ್ಲಿ ಉಳಿದುಕೊಂಡಿದ್ದು ಕಳೆದ ವರ್ಷ ಉತ್ತರ ಭಾರತ ಮೂಲದ ಯುವಕನ ಪರಿಚಯವಾಗಿ ಇಬ್ಬರೂ ಪ್ರೀತಿಸಿದ್ದಾರೆ. ಯುವತಿ ಪ್ರೀತಿಸುವುದಾಗಿ ಹೇಳಿದಾಗ ಮೊದಲಿಗೆ ಒಪ್ಪಿಕೊಳ್ಳದ ಯುವಕ ನಂತರ ಒಪ್ಪಿಕೊಂಡಿದ್ದು ಇಬ್ಬರು ಡೇಟಿಂಗ್ ನಲ್ಲಿ ಇದ್ದರು. ಈ ವೇಳೆ ಹೊರಗಡೆ ಸುತ್ತಾಡುತ್ತಿದ್ದರು. ಖಾಸಗಿ ಕ್ಷಣದ ಫೋಟೋ ತೆಗೆಸಿಕೊಂಡಿದ್ದು ಇವುಗಳನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡುವ ನೆಪದಲ್ಲಿ ಯುವತಿ ಆತನ ಪಾಸ್ವರ್ಡ್ ಪಡೆದುಕೊಂಡಿದ್ದಾಳೆ. ನಂತರ ಇಬ್ಬರ ನಡುವೆ ಬಿರುಕು ಮೂಡಿದ್ದು ಆತನ ಫೇಸ್ಬುಕ್ ನಿಂದ ತನಗೆ ಫೋಟೋಗಳನ್ನು ಕಳುಹಿಸಿಕೊಂಡಿದ್ದ ಯುವತಿ ಯುವಕನೇ ಬ್ಲಾಕ್ಮೇಲ್ ಮಾಡುತ್ತಿರುವಂತೆ ಬಿಂಬಿಸಿದ್ದಾಳೆ. ಮದುವೆಯಾಗುವಂತೆ ಆತನನ್ನು ಪೀಡಿಸಿದ್ದು, ಒಪ್ಪಿಕೊಳ್ಳದಿದ್ದಾಗ ಪರಿಹಾರ ಕೌಟುಂಬಿಕ ಸಲಹಾ ಕೇಂದ್ರಕ್ಕೆ ದೂರು ನೀಡಿದ್ದಾಳೆ. ಖಾಸಗಿ ಫೋಟೋ ಬಹಿರಂಗಪಡಿಸುವುದಾಗಿ ಪ್ರಿಯಕರ ಬೆದರಿಕೆ ಹಾಕುತ್ತಿರುವುದಾಗಿ ಆರೋಪಿಸಿದ್ದಾಳೆ. ಸಲಹಾ ಕೇಂದ್ರದ ಸಿಬ್ಬಂದಿ ವಿಚಾರಣೆ ನಡೆಸಿದಾಗ ಇದೆಲ್ಲವೂ ಗೊತ್ತಾಗಿದ್ದು, ಯುವತಿ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...