
ಬೆಂಗಳೂರು: ಅಶ್ಲೀಲ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಜಯ್ ತನಿಕಾಚಲಂ, ವಿಶ್ವಕ್ ಸೇನ್ ಬಂಧಿತ ಆರೋಪಿಗಳು. ಹೆಣ್ಣುಮಕ್ಕಳ ಫೋಟೋ ಅಪ್ಲೋಡ್ ಮಾಡುತ್ತಿದ್ದ ಇವರ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಬಂಧಿಸಿದ್ದಾರೆ.
ಇವರು ಫೇಸ್ಬುಕ್ ಮತ್ತು ಇನ್ ಸ್ಟಾಗ್ರಾಮ್ ನಿಂದ ಫೋಟೋಗಳನ್ನು ಕದ್ದು ಅಶ್ಲೀಲ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಸೈಬರ್ ಕ್ರೈಮ್, ಸಿಇಎನ್ ಠಾಣೆಗಳಲ್ಲಿ 7 ಪ್ರಕರಣ ದಾಖಲಾಗಿತ್ತು.