ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿ ಮಾಡಿರುವುದರಿಂದ ಬಹುತೇಕ ಜನ ಊರುಗಳತ್ತ ಮುಖಮಾಡಿದ್ದು, ಮನೆ ಖಾಲಿ ಮಾಡಿಕೊಂಡು ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ.
ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಜನ ಊರಿಗೆ ಹೋಗಿದ್ದು, ಮಂಗಳವಾರ ಬೆಳಿಗ್ಗೆಯಿಂದಲೇ ಊರಿಗೆ ಹೊರಟಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿದೆ.
ಹೆಚ್ಚುವರಿ ಬಸ್, ಖಾಸಗಿ ವಾಹನಗಳಲ್ಲಿ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದಾರೆ. ಮೊದಲು ಲಾಕ್ಡೌನ್ ಎರಡು ತಿಂಗಳಿಗೂ ಅಧಿಕ ಕಾಲ ವಿಸ್ತರಣೆಯಾಗಿದ್ದರಿಂದ ಜನ ತತ್ತರಿಸಿ ಹೋಗಿದ್ದರು. ಈ ಬಾರಿಯೂ ಮೊದಲು ಒಂದು ವಾರ ಲಾಕ್ಡೌನ್ ಮಾಡಿ ನಂತರ ಮುಂದುವರಿಸಲಾಗುವುದು ಎನ್ನುವ ಆತಂಕದಲ್ಲಿ ಜನರಿದ್ದಾರೆ. ಆದರೆ ಸಿಎಂ ಯಡಿಯೂರಪ್ಪ ಮುಂದುವರಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಹೀಗಿದ್ದರೂ ಕೂಡ ಜನ ಬೆಂಗಳೂರಿಗೆ ವಿದಾಯ ಹೇಳತೊಡಗಿದ್ದಾರೆ.