ತುಮಕೂರು: ವೃದ್ದಾಪ್ಯ ವೇತನಕ್ಕೆ ಕಂದಾಯ ಇಲಾಖೆಗೆ ಯಾರೂ ಅಲೆಯಬೇಕಿಲ್ಲ ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಯಂತೆ ಯಾರಿಗೆ 60 ವರ್ಷ ಆಗುತ್ತದೆಯೋ ಅಂತಹ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ ತಲುಪಿಸಲಾಗುವುದು.
ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಪತ್ರ ಬರೆದು ಕರೆಸಿಕೊಂಡು ವೃದ್ಧಾಪ್ಯ ವೇತನ ಮಂಜೂರು ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು.
ತುಮಕೂರು ಜಿಲ್ಲೆ ಶಿರಾದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಬಗ್ಗೆ ಮಾಹಿತಿ ನೀಡಿ ರಾಜ್ಯ ಸರ್ಕಾರ ವರ್ಷಕ್ಕೆ ಸುಮಾರು 7000 ಕೋಟಿ ವೃದ್ಧಾಪ್ಯ ವೇತನಕ್ಕೆ ಖರ್ಚು ಮಾಡುತ್ತಿದೆ. ಆದರೆ ಫಲಾನುಭವಿಗಳಿಗೆ ತಲುಪಿಸುವಲ್ಲಿ ಕೆಲವೆಡೆ ಲೋಪ ಕಂಡು ಬಂದಿದ್ದು ಅರ್ಹರ ಮನೆಬಾಗಿಲಿಗೆ ಯೋಜನೆ ತಲುಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಬಳ್ಳಾರಿ, ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ಮನೆಬಾಗಿಲಿಗೆ ವೃದ್ಧಾಪ್ಯ ವೇತನ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ಶೀಘ್ರದಲ್ಲೇ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.