ಬೆಂಗಳೂರು: ಪತಿ ಬೇಕು ಡಾಟ್ ಕಾಂ ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸ್ ಅಧಿಕಾರಿಗೆ ಬಂಧನ ಭೀತಿ ಶುರುವಾಗಿದೆ. ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ನೆಲಮಂಗಲ ಠಾಣೆ ಪಿಎಸ್ಐ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ.
ಪಿಎಸ್ಐ ಮಂಜುನಾಥ್, ಪತಿ ಬೇಕು ಡಾಟ್ ಕಾಂ ಸಿನಿಮಾಗೆ ಬಂಡವಾಳ ಹಾಕಿದ್ದರು. ಈ ಸಿನಿಮಾ ಭಾರೀ ನಷ್ಟ ಅನುಭವಿಸಿತ್ತು. ನಿರ್ದೇಶಕ ರಾಕೇಶ್ ಗೆ ಠಾಣೆಗೆ ಕರೆಸಿದ್ದ ಪಿಎಸ್ಐ ಬೆದರಿಸಿ ಚೆಕ್ ಮೇಲೆ ಸಹಿ ಹಾಕಿಸಿಕೊಂಡಿದ್ದರು. ನಂತರ ಹಣ ನೀಡುವಂತೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಪಿಎಸ್ಐ ಮಂಜುನಾಥ್ ಗೆ ಬಂಧನ ವಾರಂಟ್ ಜಾರಿ ಮಾಡುವಂತೆ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಆದೇಶ ನೀಡಿದೆ.