ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 6 ಸೇವೆಗಳನ್ನು ಸೇವಾಸಿಂಧು ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ಆನ್‍ಲೈನ್ ವ್ಯವಸ್ಥೆಯಡಿ ನಿರ್ವಹಿಸಲಾಗುತ್ತಿದೆ.
ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್‍ಪಾಸ್, ವಿಕಲಚೇತನರ ರಿಯಾಯಿತಿ ಪಾಸ್, ಅಂಧರ ಉಚಿತ ಪಾಸ್, ಸ್ವಾತಂತ್ಯ್ರ ಹೋರಾಟಗಾರರ ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಪತಿ/ ಪತ್ನಿಯರ ಉಚಿತ ಕೂಪನ್ಸ್ ಮತ್ತು ಅಪಘಾತ ಪರಿಹಾರ ನಿಧಿ ಈ ಸೇವೆಗಳನ್ನು ಸೇವಾ ಸಿಂಧು ಪೋರ್ಟಲ್ ಕಡ್ಡಾಯವಾಗಿ ಆನಲೈನ್ ವ್ಯವಸ್ಥೆಯಡಿ ನಿರ್ವಹಿಸಲಾಗುತ್ತಿದೆ.
ಫಲಾನುಭವಿಗಳು ನವೀಕರಿಸಿಕೊಳ್ಳಲು ಮತ್ತು ಹೊಸ ಪಾಸ್ ಪಡೆದುಕೊಳ್ಳಲು ಸೇವಾಸಿಂಧು ಪೋರ್ಟಲ್ ನಲ್ಲಿ ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಯಲ್ಲಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಅರ್ಜಿಗೆ ಸಂಬಂಧಪಟ್ಟ ದಾಖಲೆಗಳನ್ನು ಅಪಲೋಡ್ ಮಾಡಬೇಕು. ಭೌತಿಕವಾಗಿ ಬಸ್‍ಪಾಸ್ ಪಡೆಯಲು ಬಂದಾಗ ಅಗತ್ಯ ದಾಖಲಾತಿ ಹಾಗೂ ಅದರ ಜೆರಾಕ್ಸ್ ಪ್ರತಿಯನ್ನು ಕಚೇರಿಗೆ ಸಲ್ಲಿಸಿ ಪಾಸ್ ಪಡೆಯಬಹುದು ಎಂದು ಕ.ರಾ.ರ.ಸಾ.ನಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.