
ಬೆಂಗಳೂರು: ಆನ್ಲೈನ್ ಶಿಕ್ಷಣ ಕುರಿತಾಗಿ ಪೋಷಕರಲ್ಲಿ ಆತಂಕ ಎದುರಾಗಿದೆ. ಮಕ್ಕಳಿಗೆ ವಿಡಿಯೋ ಮೂಲಕ ಪಾಠ ಮಾಡುವ ವೇಳೆ ಅಶ್ಲೀಲ ಚಿತ್ರಗಳು ಪಾಪ್ ಅಪ್ ಆಗುತ್ತಿವೆ ಎನ್ನಲಾಗಿದೆ.
ಪಾಠದ ವಿಡಿಯೋ ಜೊತೆಗೆ ಅಶ್ಲೀಲ ಚಿತ್ರಗಳು ಪಾಪ್ ಅಪ್ ಆಗುತ್ತಿವೆ. ಸರ್ವಶಿಕ್ಷಣ ಅಭಿಯಾನದ ವಿಡಿಯೋ ಪ್ರಸಾರದ ವೇಳೆಯಲ್ಲಿ ಅಶ್ಲೀಲ ಚಿತ್ರಗಳು ಪಾಪ್ ಅಪ್ ಆಗುತ್ತಿವೆ.
ಯುಟ್ಯೂಬ್, ಫೇಸ್ ಬುಕ್ ನಲ್ಲಿ ಎಸ್ಎಸ್ಎ ಚಾನೆಲ್ ಓಪನ್ ಮಾಡಿದರೆ ಪಾಠದ ಜೊತೆಗೆ ಅಶ್ಲೀಲ ಚಿತ್ರಗಳು ಪಾಪ್ ಅಪ್ ಆಗುತ್ತಿರುವ ಹಿನ್ನೆಲೆಯಲ್ಲಿ ಆತಂಕ ಎದುರಾಗಿದೆ ಎಂದು ಹೇಳಲಾಗಿದೆ.