
ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಸದಾ ಚಿಂತಿತರಾಗಿರುತ್ತಾರೆ. ಶಾಲೆಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದ್ರಿಂದ ಪಾಲಕರ ತಲೆಬಿಸಿ ಜಾಸ್ತಿಯಾಗುತ್ತದೆ. ನೀವು ಅನುಸರಿಸುವ ಕೆಲವೊಂದು ಉಪಾಯಗಳಿಂದಾಗಿ ನಿಮ್ಮ ಮಕ್ಕಳು ಸಂಪೂರ್ಣ ಸುರಕ್ಷಿತರಾಗಿರುವಂತೆ ನೋಡಿಕೊಳ್ಳಬಹುದಾಗಿದೆ.
ಮಕ್ಕಳು ಶಾಲೆಗೆ ಹೋಗುತ್ತಿದ್ದರೆ ಪಾಲಕರು ಅವಶ್ಯವಾಗಿ ಈ ಕೆಲಸಗಳನ್ನು ಮಾಡಬೇಕು.
ತಂದೆ-ತಾಯಿ ಶಾಲೆಯ ಶಿಕ್ಷಕರ ಜೊತೆ ಸದಾ ಮಾತುಕತೆ ನಡೆಸುತ್ತಿರಬೇಕು.
ಶಾಲೆಯ ಸುರಕ್ಷತೆ ಬಗ್ಗೆ ಪಾಲಕರು ಆಗಾಗ ಪರೀಕ್ಷೆ ನಡೆಸುತ್ತಿರಬೇಕು.
ಶಾಲೆಗೆ ಮಕ್ಕಳನ್ನು ಸೇರಿಸುವ ಮೊದಲೇ ಹಿಂದಿನ ರೆಕಾರ್ಡ್ ಚೆಕ್ ಮಾಡಬೇಕು.
ಪಾಲಕರೆಲ್ಲ ಸೇರಿ ಒಂದು ಗುಂಪು ಮಾಡಿಕೊಂಡು ಮಾತುಕತೆ ನಡೆಸುತ್ತಿರಬೇಕು.
ಮಕ್ಕಳಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ಮಾಹಿತಿ ನೀಡಿ.
ಮಕ್ಕಳು ಶಾಲೆಯಿಂದ ಬರ್ತಿದ್ದಂತೆ ಶಾಲೆಯಲ್ಲಿ ನಡೆದ ಎಲ್ಲ ಘಟನೆಗಳನ್ನು ವಿಚಾರಿಸಿ ತಿಳಿದುಕೊಳ್ಳಿ.
ಏಕಾಂಗಿಯಾಗಿ ಶೌಚಾಲಯಕ್ಕೆ ಹೋಗದಂತೆ ಮಕ್ಕಳಿಗೆ ಹೇಳಿ.
ಮಕ್ಕಳ ಬಳಿ ನಿಮ್ಮ ಅಥವಾ ನಿಮ್ಮ ಕುಟುಂಬದ ಸದಸ್ಯರ ನಂಬರ್ ಇರುವಂತೆ ನೋಡಿಕೊಳ್ಳಿ.
ಮಕ್ಕಳಿಗೆ ಮನೆಯ ವಿಳಾಸ ಗೊತ್ತಿರಲಿ.
ಮಕ್ಕಳ ಬದಲಾವಣೆಗಳ ಬಗ್ಗೆ ಗಮನವಿರಲಿ.
ಆಗಾಗ ಮಕ್ಕಳಿಗೆ ತಿಳಿಯದೆ ಅವರ ಬ್ಯಾಗ್ ಚೆಕ್ ಮಾಡಿ.
ತಿನ್ನುವ ಪದ್ಧತಿ, ನಿದ್ರೆಯಲ್ಲಿ ವ್ಯತ್ಯಾಸವಾದ್ರೆ ತಕ್ಷಣ ಎಚ್ಚೆತ್ತುಕೊಳ್ಳಿ.