ರಾಜ್ಯದಲ್ಲಿ ಕೊರೊನಾ 2ನೆ ಅಲೆ ಮಿತಿಮೀರಿರುವ ನಡುವಲ್ಲೇ ಪ್ರಾಣವಾಯುವಿನ ಕೊರತೆಯಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದ ರಾಜಧಾನಿ ಮಂದಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ರಾಜಧಾನಿಯ ಮೂಲೆ ಮೂಲೆಗಳಲ್ಲಿ ಆಕ್ಸಿ ಬಸ್ ಸಂಚರಿಸಲಿದ್ದು ಈ ಕಾರ್ಯಕ್ರಮಕ್ಕೆ ಆರೋಗ್ಯ ಸೌಧದಲ್ಲಿ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
ಇದೊಂದು ಮೊಬೈಲ್ ಆಕ್ಸಿ ಬಸ್ ಆಗಿದ್ದು ಬಿಬಿಎಂಪಿ ವತಿಯಿಂದ ಒಟ್ಟು 20 ಬಸ್ಗಳನ್ನ ತಯಾರು ಮಾಡಲಾಗಿದೆ. ಟ್ರಾಸ್ ಎನರ್ಜಿ ಮಾಚನಿ ಗ್ರೂಪ್ ಕೇವಲ 2 ದಿನಗಳಲ್ಲಿ ಈ ಪ್ರಾಣವಾಯು ಬಸ್ಗಳನ್ನ ಸಿದ್ಧಪಡಿಸಿದೆ. ಇದರಲ್ಲಿ 8 ಸೀಟ್ಗಳಿದ್ದು ಪ್ರತಿ ಸೀಟ್ನಲ್ಲಿಯೂ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಕಲ್ಪಿಸಲಾಗಿದೆ.
ತಮಿಳುನಾಡಿನಲ್ಲಿಯೂ ಜೆನ್ ಇಂಟರ್ನ್ಯಾಷನಲ್ ಎಂಬ ಸಂಘಟನೆಯು ಶಾಲಾ ಬಸ್ಗಳನ್ನ ಬಳಕೆ ಮಾಡಿಕೊಂಡು ಈ ರೀತಿ ಗಾಲಿ ಮೇಲೆ ಆಮ್ಲಜನಕ ಎಂಬ ಸೇವೆಯನ್ನ ಆರಂಭಿಸುವ ಮೂಲಕ ಭಾರೀ ಗಮನ ಸೆಳೆದಿತ್ತು.