ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಕೊಡುಗೆ ನೀಡಲು ಸರ್ಕಾರ ಮುಂದಾಗಿದೆ. ಆನ್ಲೈನ್ ನಲ್ಲಿ ಎಲ್ಲಾ ಸೇವೆಗಳನ್ನು ನೀಡಲು ಸಾಫ್ಟ್ ವೇರ್ ಸಿದ್ಧಪಡಿಸಲಾಗುತ್ತಿದೆ.
ಸೇವಾವಧಿ, ನೌಕರರ ವಾರ್ಷಿಕ ಕಾರ್ಯನಿರ್ವಹಣಾ ವರದಿ, ಮುಂಬಡ್ತಿ, ವೇತನ ಬಡ್ತಿ, ಜಿಪಿಎಫ್, ಮುಂಗಡ ಪಾವತಿ, ಗೃಹನಿರ್ಮಾಣ, ವಾಹನ ಖರೀದಿ, ನಿವೃತ್ತಿ ಸೌಲಭ್ಯ, ವೈದ್ಯಕೀಯ ವೆಚ್ಚ ಸೇರಿದಂತೆ ಹಲವು ಸೇವೆಗಳು ಆನ್ಲೈನ್ ನಲ್ಲಿ ಸಿಗಲಿವೆ.
ಸರ್ಕಾರಿ ನೌಕರರು ತಮ್ಮ ಸೌಲಭ್ಯಗಳಿಗಾಗಿ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಆನ್ಲೈನ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಮುಂದಿನ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಸಿಗಲಿದೆ. ಕೆಜಿಐಡಿ, ಜಿಪಿಎಸ್ ಮೊದಲಾದ 32 ವ್ಯವಸ್ಥೆಗಳನ್ನು ಹೊಸ ಸಾಫ್ಟ್ ವೇರ್ ನಲ್ಲಿ ಒಂದೇ ಕಡೆ ಸಿಗುವಂತೆ ಮಾಡಲಾಗುವುದು ಎಂದು ಹೇಳಲಾಗಿದೆ.