ಬೆಂಗಳೂರು: 10ನೇ ತರಗತಿವರೆಗಿನ ಮಕ್ಕಳಿಗೆ ಆನ್ಲೈನ್ ಶಿಕ್ಷಣ ನಡೆಸಲು ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಆಫ್ ಲೈನ್ ಶಿಕ್ಷಣಕ್ಕೂ ಸಲಹೆ ನೀಡಲಾಗಿದೆ.
ಎಲ್ಕೆಜಿಯಿಂದ 10 ನೇ ತರಗತಿವರೆಗೆ ಶಾಲೆಗಳು ಆರಂಭವಾಗುವವರೆಗೆ ಆನ್ ಲೈನ್ ಕ್ಲಾಸ್ ನಡೆಸಬಹುದಾಗಿದೆ. ಸೀಮಿತ ಅವಧಿಯಲ್ಲಿ ಆನ್ ಲೈನ್ ಕ್ಲಾಸ್ ನಡೆಸಲು ಶಿಫಾರಸು ಮಾಡಲಾಗಿದ್ದು, ವರದಿ ಪರಿಶೀಲನೆ ಬಳಿಕ ಮುಂದಿನ ಸರ್ಕಾರ ಕ್ರಮ ಕೈಗೊಳ್ಳಲಿದೆ.
ಆನ್ಲೈನ್ ಶಿಕ್ಷಣದ ಸಂದರ್ಭದಲ್ಲಿ ಮಕ್ಕಳೊಂದಿಗೆ ಪೋಷಕರು ಕಡ್ಡಾಯವಾಗಿ ಇರಬೇಕೆಂದು ಸಮಿತಿ ಹೇಳಿದೆ.
ಪ್ರಿಕೆಜಿ, ಎಲ್ಕೆಜಿ, ಯುಕೆಜಿ ವಾರದಲ್ಲಿ ಪೋಷಕರ ಉಪಸ್ಥಿತಿಯಲ್ಲಿ ವಾರಕ್ಕೆ 3 ದಿನ 30 ನಿಮಿಷದ ತಲಾ 1 ಅವಧಿ,
1 -2ನೇ ತರಗತಿಯ ಮಕ್ಕಳಿಗೆ ಪೋಷಕರ ಕಡ್ಡಾಯ ಉಪಸ್ಥಿತಿಯಲ್ಲಿ ವಾರಕ್ಕೆ 3 ದಿನ ತಲಾ 30 ನಿಮಿಷದ 2 ಅವಧಿ, ಆಟ-ಪಾಠ, ಕಥೆ, ಪ್ರಾಸ ಚಟುವಟಿಕೆಗಳನ್ನು ನಡೆಸಬಹುದು.
3 -5 ನೇ ತರಗತಿ ಮಕ್ಕಳಿಗೆ ವಾರದಲ್ಲಿ 5 ದಿನ ಪ್ರತಿದಿನ 30 ನಿಮಿಷ ಅವಧಿಯ 2 ಆನ್ಲೈನ್ ಕ್ಲಾಸ್ ನಡೆಸಲು ಶಿಫಾರಸು ಮಾಡಲಾಗಿದೆ.
6 -8 ನೇ ತರಗತಿ ಮಕ್ಕಳಿಗೆ ವಾರದಲ್ಲಿ 6 ದಿನ ಆನ್ಲೈನ್ ಕ್ಲಾಸ್ ನಡೆಸಬಹುದು. 30 ರಿಂದ 45 ನಿಮಿಷದ 3 ತರಗತಿ ನಡೆಸಬಹುದು.
9 ರಿಂದ 10ನೇ ತರಗತಿ ಮಕ್ಕಳಿಗೆ ವಾರದಲ್ಲಿ 6 ದಿನ 30 ರಿಂದ 45 ನಿಮಿಷದ 4 ತರಗತಿ ನಡೆಸಬಹುದೆಂದು ಶಿಫಾರಸು ಮಾಡಲಾಗಿದೆ.