alex Certify BIG NEWS: 1 ರಿಂದ 10ನೇ ತರಗತಿ ಮಕ್ಕಳಿಗೆ ಆನ್ಲೈನ್ ಶಿಕ್ಷಣಕ್ಕೆ ತಜ್ಞರ ಸಮಿತಿ ಶಿಫಾರಸು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 1 ರಿಂದ 10ನೇ ತರಗತಿ ಮಕ್ಕಳಿಗೆ ಆನ್ಲೈನ್ ಶಿಕ್ಷಣಕ್ಕೆ ತಜ್ಞರ ಸಮಿತಿ ಶಿಫಾರಸು

 ಬೆಂಗಳೂರು: 1 ರಿಂದ 10ನೇ ತರಗತಿ ಮಕ್ಕಳಿಗೆ ಆನ್ಲೈನ್ ಶಿಕ್ಷಣಕ್ಕೆ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಆನ್ಲೈನ್ ಶಿಕ್ಷಣದ ಸಂದರ್ಭದಲ್ಲಿ ಮಕ್ಕಳೊಂದಿಗೆ ಪೋಷಕರು ಕಡ್ಡಾಯವಾಗಿ ಇರಬೇಕೆಂದು ಸಮಿತಿ ಹೇಳಿದೆ. 1 – 2ನೇ ತರಗತಿಯ ಮಕ್ಕಳಿಗೆ ಪೋಷಕರ ಕಡ್ಡಾಯ ಉಪಸ್ಥಿತಿಯಲ್ಲಿ ಆಟ – ಪಾಠ, ಕಥೆ, ಪ್ರಾಸ ಚಟುವಟಿಕೆಗಳನ್ನು ನಡೆಸಬಹುದು.

3 – 5 ನೇ ತರಗತಿ ಮಕ್ಕಳಿಗೆ ವಾರದಲ್ಲಿ 5 ದಿನ 30 ನಿಮಿಷ ಅವಧಿಯ 3 ಆನ್ಲೈನ್ ಕ್ಲಾಸ್ ನಡೆಸಲು ಶಿಫಾರಸು ಮಾಡಲಾಗಿದೆ.

6 – 8 ನೇ ತರಗತಿ ಮಕ್ಕಳಿಗೆ ವಾರದಲ್ಲಿ 6 ದಿನ ಆನ್ಲೈನ್ ಕ್ಲಾಸ್ ನಡೆಸಬಹುದು. 30 ರಿಂದ 45 ನಿಮಿಷದ 3 ತರಗತಿ ನಡೆಸಬಹುದು.

ಅದೇ ರೀತಿ 9 ರಿಂದ 10ನೇ ತರಗತಿ ಮಕ್ಕಳಿಗೆ ವಾರದಲ್ಲಿ 6 ದಿನ 30 ರಿಂದ 45 ನಿಮಿಷದ 4 ತರಗತಿ ನಡೆಸಬಹುದೆಂದು ಶಿಫಾರಸು ಮಾಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...