ಬೆಂಗಳೂರು: 1 ಕೆಜಿ ಈರುಳ್ಳಿ ಬೆಲೆ 60 ರೂಪಾಯಿಗಿಂತಲೂ ಹೆಚ್ಚಾಗಿದೆ. ಯಶವಂತಪುರ ಮಂಡಿಯಲ್ಲಿ ಉತ್ತಮ ಈರುಳ್ಳಿ ಬೆಲೆ ಬಲು ದುಬಾರಿಯಾಗಿದೆ.
ಭಾರೀ ಮಳೆಯಿಂದಾಗಿ ಬೆಳೆ ಹಾನಿಯಾದ ಕಾರಣಕ್ಕೆ ಈ ಬಾರಿ ಈರುಳ್ಳಿ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿದಿನ 1000 ಲೋಡ್ ನಷ್ಟು ಈರುಳ್ಳಿ ಪೂರೈಕೆಯಾಗುತ್ತದೆ. ಈಗ 150 ಲೋಡ್ ಮಾತ್ರ ಪೂರೈಕೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಈರುಳ್ಳಿ ದರ ಭಾರಿ ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.
ಮಳೆ ಹಾನಿಯಿಂದ ಬೆಳೆ ನಷ್ಟವಾಗಿದ್ದು ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಮಹಾರಾಷ್ಟ್ರದಿಂದ ಬರುತ್ತಿದ್ದ ಈರುಳ್ಳಿ ಕೂಡ ಬರುತ್ತಿಲ್ಲ. ರಾಜ್ಯದಲ್ಲಿ ಭಾರಿ ಮಳೆಯಾಗಿರುವುದರಿಂದ ಬೆಳೆ ಹಾನಿಯಾಗಿದೆ. ಒಂದು ಕೆಜಿ ಈರುಳ್ಳಿ ಬೆಲೆ 60 ಗಡಿದಾಟಿದ್ದು, ಇನ್ನಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ. ಈರುಳ್ಳಿಗೆ ಉತ್ತಮ ಧಾರಣೆ ಬಂದಿದ್ದರೂ ರೈತರ ಬಳಿ ಈರುಳ್ಳಿ ಇಲ್ಲವಾಗಿದೆ. ಹೊಲದಲ್ಲಿದ್ದ ಈರುಳ್ಳಿ ಕೊಳೆಯುತ್ತಿದೆ. ಕಟಾವು ಮಾಡಿದ್ದ ಈರುಳ್ಳಿ ಕೂಡ ಮಳೆಯಿಂದ ಹಾಳಾಗಿದೆ. ದರ ಹೆಚ್ಚಿದ್ದರೂ ಮಾರಾಟಕ್ಕೆ ಈರುಳ್ಳಿ ಇಲ್ಲದೇ ರೈತರು ಕೈಕೈ ಹಿಸುಕಿಕೊಳ್ಳುವಂತಾಗಿದೆ.