
ಹೊಸ ವರ್ಷಾಚರಣೆಯ ಭರದಲ್ಲಿ 85 ಲೀಟರ್ ಮದ್ಯ, ಅನುಮತಿಗಿಂತ 20 ಪಟ್ಟು ಹೆಚ್ಚು ಸಂಗ್ರಹಿಸಿಟ್ಟುಕೊಂಡಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಣಿ ಹೆಸರಿನ ಈ ವ್ಯಕ್ತಿ ರಾಜಾಜಿನಗರದ ತಮ್ಮ ಮನೆಯಲ್ಲಿ 114 ಬಾಟಲಿಗಳಲ್ಲಿ ಮದ್ಯವನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಮೇಖ್ರಿ ವೃತ್ತದಲ್ಲಿರುವ ವಾಯು ಪಡೆಯ ಕ್ಯಾಂಟೀನ್‌ನಿಂದ ಈ ಮದ್ಯವನ್ನು ತಂದಿದ್ದಾಗಿ ವೆಸ್ಟ್ ಆಪ್ ಕಾರ್ಡ್ ರಸ್ತೆಯ ನಿವಾಸಿ ಮಣಿ ತಿಳಿಸಿದ್ದು, ಇದನ್ನು ಪುಷ್ಟೀಕರಿಸಲು ಆತನ ಬಳಿ ಯಾವುದೇ ಸೂಕ್ತ ದಾಖಲೆಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ ಅಬಕಾರಿ ಕಾಯಿದೆಯ 34ನೇ ಸೆಕ್ಷನ್ (ಅಕ್ರಮ ಸಂಗ್ರಹದ ವಿರುದ್ಧ ದಂಡ) ಅಡಿ ಆಪಾದಿತನ ಮೇಲೆ ಆರೋಪಪಟ್ಟಿ ದಾಖಲಿಸಲಾಗಿದೆ.