ಅತ್ಯಾಚಾರ ಆರೋಪಿ ಹಾಗೂ ಸ್ವಯಂ ಘೋಷಿತ ದೇವಮಾನವ ತಮ್ಮ ಚಿತ್ರ ವಿಚಿತ್ರ ಪ್ರವಚನಗಳ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗ್ತಾನೇ ಇರ್ತಾರೆ.
ಭಾರತದಿಂದ ತಲೆಮರೆಸಿಕೊಂಡು ಈಕ್ವೆಡಾರ್ನಲ್ಲಿ ಆಶ್ರಯ ಪಡೆದಿದ್ದ ನಿತ್ಯಾನಂದ ಸ್ವಾಮಿ, ತಾನಿರುವ ಪ್ರದೇಶಕ್ಕೆ ಕೈಲಾಸ ಎಂದೂ ನಾಮಕರಣ ಮಾಡಿದ್ದ. 2019ರ ನವೆಂಬರ್ ತಿಂಗಳಲ್ಲಿ ತನ್ನ ಹೊಸ ದೇಶದ ಬಗ್ಗೆ ಘೋಷಣೆ ಮಾಡಿದ್ದ ನಿತ್ಯಾನಂದ ಇದೀಗ ತನ್ನ ದೇಶ ಕೈಲಾಸಕ್ಕೆ ಬರಲು ವೀಸಾ ಅರ್ಜಿ ಸಲ್ಲಿಸಿ ಎಂದು ಭಕ್ತರಲ್ಲಿ ಕೇಳಿಕೊಂಡಿದ್ದಾನೆ.
ಜನರು ನಿತ್ಯಾನಂದನ ಕೈಲಾಸಕ್ಕೆ ಭೇಟಿ ನೀಡಲು ಇ ವೀಸಾ ಪಡೆಯಬಹುದು ಎಂದು ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಆದರೆ ಭೌಗೋಳಿಕವಾಗಿ ನಿಜವಾಗಿಯೂ ಇಂತಹದ್ದೊಂದು ಪ್ರದೇಶ ಇದೆನಾ ಅನ್ನೋದೇ ಇನ್ನೂ ಯಾರಿಗೂ ಖಚಿತವಾಗಿ ಗೊತ್ತಿಲ್ಲ.
ಕಳೆದ ವರ್ಷ ನಿತ್ಯಾನಂದ ಕೈಲಾಸ ದೇಶದ ಬಗ್ಗೆ ಘೋಷಣೆ ಮಾಡಿದ ಬಳಿಕ ಇದು ಈಕ್ವೇಡಾರ್ನಲ್ಲಿರುವ ಒಂದು ದ್ವೀಪ ಎಂದು ವರಿಯಾಗಿತ್ತು. ಅಲ್ಲದೇ ಈ ದ್ವೀಪವನ್ನ ನಿತ್ಯಾನಂದ ಖರೀದಿ ಮಾಡಿದ್ದಾನೆ ಎಂದೂ ಹೇಳಲಾಗಿತ್ತು.
ಆದರೆ ದಕ್ಷಿಣ ಅಮೆರಿಕ ನಾವು ಯಾವುದೇ ದ್ವೀಪವನ್ನ ಈತನಿಗೆ ಮಾರಾಟ ಮಾಡಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ. ನಿತ್ಯಾನಂದ ಮಾತ್ರ ಇದು ತನ್ನದೇ ದೇಶ ಎಂದು ಹೇಳಿಕೊಂಡಿದ್ದು ಕೈಲಾಸ ದೇಶಕ್ಕೆ ಹೊಸ ಕರೆನ್ಸಿ, ರಿಸರ್ವ್ ಬ್ಯಾಂಕ್ ನಿರ್ಮಿಸುವ ತಯಾರಿಯಲ್ಲಿದ್ದಾನೆ.