ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ವಿವಾಹಿತೆಯೊಂದಿಗೆ ಯುವಕ ಪರಾರಿಯಾಗಿದ್ದು ಅವರನ್ನು ಪತ್ತೆ ಹಚ್ಚಿ ಪೊಲೀಸರು ಕರೆತಂದಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಹಿರಿಯರು, ಪೊಲೀಸರು ರಾಜಿ ಪಂಚಾಯಿತಿ ನಡೆಯುವಾಗಲೇ ಯುವಕ ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿವಾಹಿತೆ ಹಾಗೂ ಯುವಕ ಮೊದಲೇ ಪ್ರೀತಿಸಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮನೆಯವರು ಬೇರೆ ಯುವಕನೊಂದಿಗೆ ಮದುವೆ ಮಾಡಿದ್ದರೆನ್ನಲಾಗಿದೆ.
ಮದುವೆಯ ನಂತರವೂ ಇಬ್ಬರ ಪ್ರೀತಿ ಮುಂದುವರೆದಿದ್ದು ಮೂರು ದಿನಗಳ ಹಿಂದೆ ಇವರು ಮನೆ ಬಿಟ್ಟು ತೆರಳಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬೇರೆ ವ್ಯಕ್ತಿಯ ಪತ್ನಿಯನ್ನು ಕರೆದುಕೊಂಡು ಹೋಗಿದ್ದಕ್ಕೆ ಹಿರಿಯರು ಬೈದಾಡಿದ್ದರಿಂದ ಯುವಕ ಸ್ಯಾನಿಟೈಸರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.