ಕೋಲಾರ: ಕೋವಿಡ್-19 ಕರೋನ ವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವ ಸಲುವಾಗಿ ಜಾರಿಗೊಳಿಸಿರುವ ಲಾಕ್ಡೌನ್ ಪರಿಣಾಮದಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕೈಮಗ್ಗ ನೇಕಾರರಿಗೆ ರಾಜ್ಯ ಸರ್ಕಾರವು “ನೇಕಾರ ಸಮ್ಮಾನ್” ಯೋಜನೆಯಡಿ ವಾರ್ಷಿಕ 2000 ರೂ. ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುವುದು.
ಯೋಜನೆಯಡಿ ಘೋಷಿಸಿರುವ ವಾರ್ಷಿಕ 2,000 ರೂ. ಆರ್ಥಿಕ ನೆರವನ್ನು ಪಡೆಯಲು ಕೈಮಗ್ಗ ನೇಕಾರರು ಕೈಮಗ್ಗ ನೇಕಾರಿಕೆಯಲ್ಲಿ ತೊಡಗಿದ್ದು, 4ನೇ ರಾಷ್ಟ್ರೀಯ ಕೈಮಗ್ಗ ಗಣತಿ ಪಟ್ಟಿಯಲ್ಲಿ ನೋಂದಾಯಿಸಿರಬೇಕು ಹಾಗೂ 2,000 ರೂ. ನೇರವಾಗಿ ನೇಕಾರರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾಗಿರುವುದರಿಂದ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ. ಅರ್ಹ ಕೈಮಗ್ಗ ನೇಕಾರರು ಸೇವಾ ಸಿಂಧು ವೆಬ್ ಸೈಟ್ನಲ್ಲಿ ಆನ್ಲೈನ್ ಅರ್ಜಿಗಳನ್ನು ಸಲ್ಲಿಸಬೇಕು.
ಜಿಲ್ಲೆಯಲ್ಲಿ ಉಪ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ನಂ.ಎಸ್-9, ನೂತನ ಜಿಲ್ಲಾಡಳಿತ ಭವನ, ಎನ್.ಹೆಚ್-75, ಮುಳಬಾಗಿಲು ರಸ್ತೆ, ಕುಂಬಾರಹಳ್ಳಿ ಗ್ರಾಮ, ಟಮಕ ಅಂಚೆ, ಕೋಲಾರ ತಾಲ್ಲೂಕು-563103 ಇಲ್ಲಿ ನೋಂದಣಿ ಕೇಂದ್ರವನ್ನು ತೆರೆಯಲಾಗಿರುತ್ತದೆ.
2020 ಜೂನ್ 10 ರಿಂದ ಅರ್ಜಿ ಸಲ್ಲಿಕೆ ಕಾರ್ಯ ಪ್ರಾರಂಭವಾಗಿದ್ದು, ಸಂಬಂಧಪಟ್ಟ ಗ್ರಾಮಗಳ ಕೈಮಗ್ಗ ನೇಕಾರರು ನಿಗಧಿತ ನಮೂನೆಯಲ್ಲಿ ಅರ್ಜಿ (ಅರ್ಜಿ ಫಾರಂಗಳನ್ನು ನೋಂದಣಿ ಕೇಂದ್ರದಲ್ಲಿ ಪಡೆಯಬಹುದಾಗಿದೆ), ಆಧಾರ್ ಕಾರ್ಡ್ ಪ್ರತಿ, ರೇಷನ್ ಕಾರ್ಡ್ ಪ್ರತಿ, ಆಧಾರ್ ಕಾರ್ಡ್ ಲಿಂಕ್ ಮಾಡಿರುವ ವೈಯಕ್ತಿಕ ನೇಕಾರರ ಉಳಿತಾಯ ಖಾತೆಯ ಬ್ಯಾಂಕ್ ಪಾಸ್ಬುಕ್ ಪ್ರತಿ, ಪಾಸ್ ಪೋರ್ಟ್ ಅಳತೆಯ ಪೋಟೋ ಸೇರಿದಂತೆ ಸೂಕ್ತ ದಾಖಲಾತಿಗಳೊಂದಿಗೆ ಜೂನ್ 12 ರೊಳಗಾಗಿ ಖುದ್ದು ಭೇಟಿ ನೀಡಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ನಂ.ಎಸ್-9, ನೂತನ ಜಿಲ್ಲಾಡಳಿತ ಭವನ, ಎನ್.ಹೆಚ್-75, ಮುಳಬಾಗಿಲು ರಸ್ತೆ, ಕುಂಬಾರಹಳ್ಳಿ ಗ್ರಾಮ, ಟಮಕ ಅಂಚೆ, ಕೋಲಾರ ತಾಲ್ಲೂಕು-563103 ಹಾಗೂ ದೂರವಾಣಿ ಸಂಖ್ಯೆ: 08152-243519ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.