ಮೈಸೂರು: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜಂಬೂ ಸವಾರಿ ಮೆರವಣಿಗೆ ನಡೆಯುತ್ತಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಆನೆ ಗಾಂಭೀರ್ಯದ ನಡಿಗೆಯೊಂದಿಗೆ ಹೆಜ್ಜೆ ಹಾಕಿದೆ.
ಅಭಿಮನ್ಯು ಆನೆಗೆ ವಿಜಯಾ ಮತ್ತು ಕಾವೇರಿ ಆನೆಗಳು ಸಾಥ್ ನೀಡಿವೆ. ಈ ಬಾರಿ 290 ಮೀಟರ್ ಗೆ ಮಾತ್ರ ಅಂಬಾರಿ ಮೆರವಣಿಗೆ ಸೀಮಿತವಾಗಿದೆ. 300 ಗಣ್ಯರಿಗಷ್ಟೇ ಜಂಬೂಸವಾರಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಮೆರವಣಿಗೆಯಲ್ಲಿ ಐದು ಕಲಾತಂಡಗಳು, ಎರಡು ಸ್ತಬ್ದ ಚಿತ್ರ ಪ್ರದರ್ಶನವಿದೆ. ಕೊರೋನಾ ವಾರಿಯರ್ಸ್ ಸ್ತಬ್ಧಚಿತ್ರ, ಮೈಸೂರು ಸಂಸ್ಕೃತಿ ಪ್ರತೀಕದ ಸ್ತಬ್ದ ಚಿತ್ರ ಮೆರವಣಿಗೆ ನಡೆದಿದೆ.
ಕೊರೋನಾ ಆತಂಕದ ಕಾರಣ ಸರಳ ದಸರಾ ಮಹೋತ್ಸವ ನಡೆಯುತ್ತಿದ್ದು, ಪ್ರೇಕ್ಷಕರಿಲ್ಲದ ಆಚರಣೆಗೆ ಜಂಬುಸವಾರಿ ಸಾಕ್ಷಿಯಾಗಿದೆ. ಕಳೆದ ಸಲ 24,400 ಜನ ಅರಮನೆ ಆವರಣದಲ್ಲಿದ್ದರು. ಈ ಬಾರಿ ಕೇವಲ 300 ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರತಿವರ್ಷ ಜಂಬೂಸವಾರಿ ಮೆರವಣಿಗೆ 5 ಕಿಲೋಮೀಟರ್ ದೂರ ಸಾಗುತ್ತಿತ್ತು. ಈ ಬಾರಿ ಅರಮನೆ ಆವರಣದಲ್ಲಿ ಮೆರವಣಿಗೆ ಸಾಗಲಿದೆ. ಪ್ರತಿ ಬಾರಿ ರಾಜಬೀದಿಯಲ್ಲಿ ಜಂಬೂಸವಾರಿ ಮೆರವಣಿಗೆ ವೈಭವದಿಂದ ನಡೆಯುತ್ತಿದ್ದು ಈ ಬಾರಿ ರಾಜಬೀದಿಯಲ್ಲಿ ಜಂಬುಸವಾರಿ ಇರುವುದಿಲ್ಲ.