ಬೆಂಗಳೂರು: ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ನಿಧನರಾದ ಬೆನ್ನಲ್ಲೇ ಕುಟುಂಬದಲ್ಲಿ ಆಸ್ತಿ ವಿವಾದ ಉಂಟಾಗಿದೆ.
ಆಸ್ತಿಯಲ್ಲಿ ಪಾಲು ನೀಡುವಂತೆ ಕೋರಿ ಎರಡನೇ ಪತ್ನಿ ಅನುರಾಧ ಮುತ್ತಪ್ಪ ರೈ ಅವರು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಮುತ್ತಪ್ಪ ರೈ ಅವರ ಪುತ್ರರಾದ ರಾಕಿ, ರಿಕ್ಕಿ ಸೇರಿದಂತೆ 17 ಪ್ರತಿವಾದಿಗಳಿಗೆ ಸಿಟಿ ಸಿವಿಲ್ ಕೋರ್ಟ್ ನೋಟೀಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಆಗಸ್ಟ್ 4ಕ್ಕೆ ನಿಗದಿಪಡಿಸಿದೆ.
ಅನಾರೋಗ್ಯದ ಹಿನ್ನಲೆ ಮೇ 15 ರಂದು ಮುತ್ತಪ್ಪ ರೈ ನಿಧನರಾಗಿದ್ದು ಅವರ ನಿಧನದ ನಂತರ ಆಸ್ತಿ ವಿವಾದ ಉಂಟಾಗಿದೆ.