
ಬೆಂಗಳೂರು: ಪತ್ನಿ ಹಾಗೂ ಅತ್ತೆಗೆ ಕಿರುಕುಳ ನೀಡುತ್ತಿದ್ದ ಪತ್ನಿಯ ಮೊದಲ ಗಂಡನನ್ನು ಎರಡನೇ ಪತಿ ಕೊಲೆ ಮಾಡಿದ ಘಟನೆ ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಿದ್ದರಾಜು ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಸಿದ್ದರಾಜುವಿನ ಪತ್ನಿಯ ಎರಡನೇ ಪತಿ ಲಕ್ಷ್ಮಣ್ ಹಾಗೂ ಆತನ ಸಹಚರರು ಕೊಲೆ ಆರೋಪಿಗಳಾಗಿದ್ದಾರೆ. ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಕಳೆದ ರಾತ್ರಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮಳವಳ್ಳಿ ಮೂಲದ ಸಿದ್ದರಾಜು ಲತಾರನ್ನು ಮದುವೆಯಾಗಿದ್ದು ಪತ್ನಿಯಿಂದ ದೂರವಾಗಿದ್ದರು. ನಂತರದಲ್ಲಿ ಲತಾರನ್ನು ಲಕ್ಷ್ಮಣ್ ಮದುವೆಯಾಗಿದ್ದ. ಮದ್ಯವ್ಯಸನಿಯಾಗಿದ್ದ ಸಿದ್ದರಾಜು, ಅತ್ತೆ ಜೊತೆ ಪತ್ನಿಯ ವಿಷಯ ತೆಗೆದು ಜಗಳವಾಡುತ್ತಿದ್ದ. ಇದನ್ನು ತಿಳಿದ ಲಕ್ಷ್ಮಣ್ ಸ್ನೇಹಿತರೊಂದಿಗೆ ಸೇರಿ ಸಿದ್ಧರಾಜುನನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.