ಬೆಂಗಳೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಪ್ಪ, ಚಿಕ್ಕಪ್ಪ ಸೇರಿಕೊಂಡು ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಟ್ಟಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಬೆಟ್ಟಹಳ್ಳಿಯಲ್ಲಿ ಜಮೀನು ವಿವಾದದ ಹಿನ್ನಲೆಯಲ್ಲಿ ದೊಣ್ಣೆಯಿಂದ ಹೊಡೆದು ಮಗನನ್ನು ಕೊಲೆ ಮಾಡಲಾಗಿದೆ. 32 ವರ್ಷದ ಹರೀಶ್ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ.
ತಂದೆ ದೊಡ್ಡಯ್ಯ, ಚಿಕ್ಕಪ್ಪ ರಾಮಕೃಷ್ಣ ಸೇರಿಕೊಂಡು ಜಮೀನಿನಲ್ಲೇ ಹರೀಶ್ ನನ್ನು ಕೊಲೆ ಮಾಡಿದ್ದಾರೆನ್ನಲಾಗಿದೆ. ಕೊಲೆಯಾದ ಹರೀಶ್ ಹೆಸರಿಗೆ ಅಜ್ಜ ಆಸ್ತಿಯನ್ನು ವಿಲ್ ಮಾಡಿದ್ದು, ಎಲ್ಲಾ ಆಸ್ತಿ ತಮ್ಮ ಕೈತಪ್ಪಿದೆ ಎಂದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.