ನಾಗದೋಷ ಹೊಂದಿರುವವರಿಗೆ ಅದರ ನಿವಾರಣೆಗಾಗಿ ಆಶ್ಲೇಷ ಬಲಿ ಪೂಜೆ ಮಾಡುವ ಮೂಲಕ ಖ್ಯಾತಿ ಪಡೆದಿರುವ ಕ್ಷೇತ್ರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಮಣ್ಯ ದೇವಾಲಯ ಅತ್ಯಂತ ಪ್ರಮುಖವಾದುದು.
ಈ ಕ್ಷೇತ್ರಕ್ಕೆ ಶ್ರೀಸಾಮಾನ್ಯರಿಂದ ಹಿಡಿದು ಖ್ಯಾತನಾಮರವರೆಗೆ ಬಹುತೇಕರು ಪೂಜೆ ಸಲ್ಲಿಸಿದ್ದಾರೆ. ಇಂತಹ ಪವಿತ್ರ ಕ್ಷೇತ್ರದಲ್ಲಿ ನಾಗರ ಪಂಚಮಿ ದಿನದಂದು ವಿಶೇಷ ಘಟನೆ ನಡೆದಿದ್ದು, ಭಕ್ತರಲ್ಲಿ ಬೆರಗು ಮೂಡಿಸಿದೆ.
ನಾಗರಪಂಚಮಿ ದಿನ ದೇವಸ್ಥಾನದ ಗರ್ಭಗುಡಿಯಲ್ಲಿ ಮಹಾಭಿಷೇಕ ನಡೆಯುವ ವೇಳೆ ಹುತ್ತದಿಂದ ಹೊರಬಂದ ನಿಜ ನಾಗರ,ಒಳಾಂಗಣ ದಿಂದ ಹೊರಾಂಗಣಕ್ಕೆ ಬಂದು ನಾಗ ಪ್ರತಿಷ್ಠಾ ಮಂಟಪದ ಸಮೀಪ ದೇವಾಲಯಕ್ಕೆ ಸುತ್ತು ಹಾಕಿದೆ.