ರಾಜ್ಯದಲ್ಲಿ ಕೊರೊನಾ ಲಸಿಕೆಗೆ ಅಭಾವ ಉಂಟಾಗಿದ್ದು ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಮುಖಭಂಗವನ್ನ ಅನುಭವಿಸಿದೆ.
ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಸಿಗೋದು ಕಷ್ಟವಾಗಿದೆ ಎನ್ನುತ್ತಿರುವಾಗಲೇ ಇದೀಗ ರಾಜ್ಯಕ್ಕೆ 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಆಗಮಿಸಿದೆ. ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ರಾಜ್ಯಕ್ಕೆ 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಗಳು ಬಂದು ತಲುಪಿವೆ. ಮತ್ತೆ 2 ಕೋಟಿ ಡೋಸ್ಗೆ ಆರ್ಡರ್ ನೀಡಿದ್ದೇವೆ. ರಾಜ್ಯಕ್ಕೆ ಆದಷ್ಟು ಬೇಗ ಲಸಿಕೆಗಳು ಸಿಗಲಿದೆ. ರಾಜ್ಯದಲ್ಲಿ ಈಗಾಗಲೇ 11,12,16,340 ಮಂದಿಗೆ ಲಸಿಕೆ ನೀಡಲಾಗಿದೆ. ಸ್ಪುಟ್ನಿಕ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನ ರಾಜ್ಯದಲ್ಲೇ ಉತ್ಪಾದಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ರು.