ರಾಜಕೀಯ ವಿರೋಧಿಗಳಿಂದಲೇ ರಾಜ್ಯದಲ್ಲಿ ಸೋಂಕು ಹರಡುವಿಕೆ ಹೆಚ್ಚಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಚೆನ್ನಪಟ್ಟಣದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸೋಂಕಿನ ವಾತಾವರಣದ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದೇ ಈ ಪರಿಸ್ಥಿತಿಗೆ ಕಾರಣ ಎಂದು ಗುಡುಗಿದ್ದಾರೆ.
ಕೊರೊನಾ ಸೋಂಕಿನ ವಿಚಾರದಲ್ಲೂ ರಾಜಕೀಯ ಮಾಡಿದ ಅನೇಕರು ಜನ ಸಾಮಾನ್ಯರ ಬಳಿ ಹೋಗಿ ಲಸಿಕೆಯನ್ನ ತೆಗೆದುಕೊಳ್ಳಲೇಬೇಡಿ. ಇದರಿಂದ ದುಷ್ಪರಿಣಾಮ ಉಂಟಾಗುತ್ತೆ ಎಂದು ಹೇಳಿಕೆಗಳನ್ನ ನೀಡಿದ್ರು. ಇದನ್ನೇ ನಂಬಿದ ಜನತೆ ಆಸ್ಪತ್ರೆ ಕಡೆಗೆ ಮುಖವನ್ನೇ ಹಾಕಲಿಲ್ಲ. ಆದರೆ ಈಗ ಜನರಿಗೆ ಲಸಿಕೆಯಿಂದ ಸೋಂಕನ್ನ ತಡೆಯಬಹುದು ಎಂಬುದರ ಬಗ್ಗೆ ಅರಿವಾಗಿದೆ. ಹಾಗಾಗಿ ಲಸಿಕಾ ಕೇಂದ್ರಗಳ ಬಳಿ ಮುಗಿ ಬೀಳ್ತಿದ್ದಾರೆ ಎಂದು ಹೇಳಿದ್ರು.
ಅಲ್ಲದೇ ರಾಜ್ಯದಲ್ಲಿ ವೈದ್ಯಕೀಯ ಸೌಲಭ್ಯಗಳ ಅಭಾವದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಸರ್ಕಾರಕ್ಕೆ ವೈದ್ಯಕೀಯ ಸೌಲಭ್ಯದ ಅಭಾವ ಒಂದು ದೊಡ್ಡ ಸವಾಲಾಗಿದೆ. ಆದರೆ ಇದೇ ಸಂದರ್ಭದ ಲಾಭವನ್ನ ಬಳಿಸಿಕೊಂಡ ಕೆಲವರು ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನ ಭ್ರಷ್ಟ ಎಂದು ಬಿಂಬಿಸಲು ಹೊರಟಿದ್ದಾರೆ. ಜನರ ಜೊತೆ ನಿಲ್ಲಬೇಕಾದ ನಾಯಕರು ಈ ವೇಳೆಯಲ್ಲಿ ಕರುಣೆಯಿಂದ ವರ್ತಿಸಬೇಕು. ಈ ರೀತಿ ಪರಿಸ್ಥಿತಿಯ ರಾಜಕೀಯ ಲಾಭ ಪಡೆದವರನ್ನ ನಾವು ಖಂಡಿಸುತ್ತೇವೆ ಎಂದು ಕಿಡಿಕಾರಿದ್ರು.