
ಚಿಕ್ಕಮಗಳೂರು ಜಿಲ್ಲೆ ಮುಳ್ಳಯ್ಯನಗಿರಿ ಸಮೀಪವಿರುವ ರೆಸಾರ್ಟ್ನಲ್ಲಿ ಕೆಲ ಬಿಜೆಪಿ ನಾಯಕರು, ಹಿರಿಯ ಸಚಿವರು ರಹಸ್ಯ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ಸಚಿವರಾದ ಆರ್. ಅಶೋಕ್, ಜಗದೀಶ್ ಶೆಟ್ಟರ್, ಸಿ.ಟಿ. ರವಿ ಸೇರಿದಂತೆ ಹಲವು ನಾಯಕರು ರೆಸಾರ್ಟ್ ನಲ್ಲಿ ನಡೆದ ರಹಸ್ಯ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ತಡರಾತ್ರಿ ನಂತರ ಸಿ.ಟಿ. ರವಿ ಅಲ್ಲಿಂದ ತೆರಳಿದ್ದು, ಉಳಿದವರು ರೆಸಾರ್ಟ್ನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಆದರೆ ಇದು ರಹಸ್ಯ ಸಭೆಯಲ್ಲ, ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಚಿವರು ಪ್ರವಾಸದ ನಡುವೆ ರೆಸಾರ್ಟ್ ನಲ್ಲಿ ತಂಗಿದ್ದು ಸಹಜ ಭೇಟಿ ನಡೆದಿದೆ ಎಂದು ಹೇಳಲಾಗಿದೆ.