ಮಂಗಳೂರು: ಮೊದಲ ಬಾರಿ ಗರ್ಭಿಣಿಯರಾದವರಿಗೆ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ 5000 ರೂ. ನೆರವು ನೀಡಲಾಗುವುದು.
ಸರ್ಕಾರಿ ನೌಕರರಾದ ಮಹಿಳೆಯರು ಮಾತೃವಂದನಾ ಯೋಜನೆಗೆ ಅರ್ಹರಲ್ಲ. 2018 ರಿಂದ ಮಾತೃ ವಂದನಾ ಯೋಜನೆ ಜಾರಿಗೆ ಬಂದಿದ್ದು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ 5000 ರೂಪಾಯಿ ಜಮಾ ಮಾಡಲಾಗುವುದು.
2018 ರ ಜೂನ್ 1 ರಿಂದ ಅರ್ಜಿ ಸಲ್ಲಿಸಲು ಬಾಕಿ ಇರುವವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಎಪಿಎಲ್ ಪಡಿತರ ಚೀಟಿ ಹೊಂದಿದವರು ಕೂಡ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಆದಾಯ ಮಿತಿ ಇರುವುದಿಲ್ಲ ಎಂದು ಹೇಳಲಾಗಿದೆ.