ರಾಜ್ಯದಲ್ಲಿ ಕೊರೊನಾ ಲಾಕ್ಡೌನ್ ಆದೇಶ ಜಾರಿಯಲ್ಲಿದ್ದು, ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸಾಕಷ್ಟು ನಿರ್ಬಂಧಗಳನ್ನ ವಿಧಿಸಲಾಗಿದೆ.
ಮನೆಯಲ್ಲಿ ಮದುವೆ ಕಾರ್ಯಕ್ರಮ ಏರ್ಪಡಿಸುವವರು ಕೇವಲ 40 ಮಂದಿಗೆ ಮಾತ್ರ ಆಹ್ವಾನ ನೀಡಬೇಕು. ಹಾಗೂ ಮದುವೆ ಮನೆಯಲ್ಲಿ ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಎಂದು ಹೇಳಲಾಗಿದೆ.
ಆದರೆ ಲಾಕ್ ಡೌನ್ ಆದೇಶವನ್ನ ಸಂಪೂರ್ಣ ಗಾಳಿಗೆ ತೂರಿ ಮಂಗಳೂರು ಹೊರವಲಯದ ಅಡ್ಯಾರು ಎಂಬಲ್ಲಿ ಭರ್ಜರಿ ಮದುವೆ ಪಾರ್ಟಿ ಆಯೋಜಿಸಲಾಗಿದೆ.
18 -45 ವರ್ಷದವರಿಗೆ ಲಸಿಕೆ ತಾತ್ಕಾಲಿಕ ಸ್ಥಗಿತ
ಈ ಮದುವೆ ಪಾರ್ಟಿಯಲ್ಲಿ ನೂರಕ್ಕೂ ಹೆಚ್ಚು ಜನರು ಜಮಾಯಿಸಿದ್ದು ಮಾತ್ರವಲ್ಲದೇ ತಡರಾತ್ರಿವರೆಗೂ ಕುಣಿದು ಕುಪ್ಪಳಿಸಿದ್ದಾರೆ. ಮಾಸ್ಕ್ ಹಾಕದೇ ಸಾಮಾಜಿಕ ಅಂತರ ಕಾಪಾಡದ ಯುವಕ – ಯುವತಿಯರು ಡಿಜೆ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ.
ಅಲ್ಲದೇ ಈ ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರೂ ಸಹ ಭಾಗಿಯಾಗಿದ್ದರು ಎಂಬ ಆರೋಪವಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
https://www.youtube.com/watch?v=cP1XxrCXQQ8