
ಬೆಂಗಳೂರು: ಮದುವೆಯಾದ ತಿಂಗಳಲ್ಲೇ ಕನ್ಯತ್ವ ಪರೀಕ್ಷೆ ಮಾಡಿಸಿಕೊಳ್ಳುವಂತೆ ಗಂಡ ಬಲವಂತ ಮಾಡಿದ್ದರಿಂದ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಬಂಡೆಪಾಳ್ಯ ಠಾಣೆಗೆ ಮಹಿಳೆ ದೂರು ನೀಡಿದ್ದು ಮದುವೆಯಾಗಿ ತಿಂಗಳಾಗಿದೆ. ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಗಂಡ ಕನ್ಯತ್ವ ಪರೀಕ್ಷೆಗೆ ಪೀಡಿಸುತ್ತಿರುವುದಾಗಿ ದೂರು ನೀಡಿದ್ದು, ಇದಕ್ಕೆ ಆತನ ಕುಟುಂಬದವರು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.