ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ದಿವಂಗತ ಉದ್ಯಮಿ ವಿ.ಜಿ. ಸಿದ್ದಾರ್ಥ್ ಹೆಗಡೆ ಅವರ ಹಿರಿಯ ಪುತ್ರ ಅಮಾರ್ತ್ಯ ಹೆಗಡೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹಿರಿಯ ಪುತ್ರಿ ಐಶ್ವರ್ಯಾ ಮದುವೆ ತಾಂಬೂಲ ಶಾಸ್ತ್ರ ಶುಕ್ರವಾರ ನೆರವೇರಿದೆ.
ಅಮಾರ್ತ್ಯ ಹೆಗಡೆ ಮತ್ತು ಐಶ್ವರ್ಯಾ ಅವರ ಕುಟುಂಬದವರು ಶುಕ್ರವಾರ ತಾಂಬೂಲ ಬದಲಿಸಿಕೊಂಡು ಮದುವೆ ಮಾತುಕತೆ ನಡೆಸಿದ್ದಾರೆ. ಸದಾಶಿವನಗರದಲ್ಲಿರುವ ಎಸ್.ಎಂ. ಕೃಷ್ಣ ನಿವಾಸಕ್ಕೆ ಡಿ.ಕೆ. ಶಿವಕುಮಾರ್ ಕುಟುಂಬದ ಸದಸ್ಯರು ಆಗಮಿಸಿ ತಾಂಬೂಲ ಶಾಸ್ತ್ರವನ್ನು ಮುಗಿಸಿದ್ದಾರೆ.
ಆಗಸ್ಟ್ ನಲ್ಲಿ ನಿಶ್ಚಿತಾರ್ಥ ನಡೆಯಲಿದ್ದು ಲಾಕ್ಡೌನ್ ಮುಗಿದ ನಂತರ ಬೆಂಗಳೂರಿನಲ್ಲಿ ಮದುವೆ ನಡೆಯಲಿದೆ. ಡಿ.ಕೆ. ಶಿವಕುಮಾರ್ ಅವರೊಂದಿಗೆ ಪತ್ನಿ ಉಷಾ, ಸಹೋದರ, ಸಂಸದ ಡಿ.ಕೆ. ಸುರೇಶ್ ಮತ್ತು ತಾಯಿ ಗೌರಮ್ಮ, ಶಾಸಕ ಡಾ. ರಂಗನಾಥ್ ಮೊದಲಾದವರು ತೆರಳಿದ್ದರು ಎನ್ನಲಾಗಿದೆ.