
ಬಂಟ್ವಾಳ ತಾಲೂಕಿನ ಕಲ್ಮಂಜ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ನಾಗರಾಜ್ ಖಾರ್ವಿ ಒಂದು ಕಿಲೋಮೀಟರ್ ದೂರವನ್ನ 25 ನಿಮಿಷ 16 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿದ್ದಾರೆ. ಬೆಳಗ್ಗೆ 8:55ಕ್ಕೆ ಈಜಲು ಆರಂಭಿಸಿದ ನಾಗರಾಜ್ ಬೆಳಗ್ಗೆ 9:20ರ ಸುಮಾರಿಗೆ ಒಂದು ಕಿಲೋಮೀಟರ್ ದೂರ ಕ್ರಮಿಸಿದ್ದಾರೆ. ಸಮುದ್ರದಲ್ಲಿ ಈಜಲು ನಾಗರಾಜ್ ಪದ್ಮಾಸನ ಭಂಗಿಯನ್ನ ಬಳಸಿದರು.
ಇನ್ನು ತನ್ನ ಈ ಸಾಧನೆಗೆ ನೆರವಾದ ಗುರು ಬಿ.ಕೆ. ನಾಯಕ್ರಿಗೆ ನಾಗರಾಜ್ ಖಾರ್ವಿ ಧನ್ಯವಾದ ಅರ್ಪಿಸಿದ್ರು. ನಾನು ಮೂರನೇ ತರಗತಿಯಲ್ಲಿ ಇರುವಾಗಲೇ ಈಜನ್ನ ಕಲಿತಿದ್ದರೂ ಸಹ ಸಾಧನೆ ಮಾಡುವಷ್ಟರ ಮಟ್ಟಿಗೆ ನನ್ನ ಈಜು ಕೌಶಲ್ಯವನ್ನ ಉತ್ತಮವಾಗಿ ರೂಪಿಸಿಕೊಟ್ಟವರು ಬಿ. ಕೆ. ನಾಯಕ್ ಎಂದು ಹೇಳಿದರು.
“ನಾನು ಮೀನುಗಾರ ಸಮುದಾಯದಿಂದ ಬಂದವನಾಗಿದ್ದರಿಂದ, ನಾನು ಬಾಲ್ಯದಲ್ಲಿಯೇ ಈಜು ಕಲಿತಿದ್ದೇನೆ. ನಾನು 9 ನೇ ತರಗತಿಯಲ್ಲಿದ್ದಾಗ, ಹಿರಿಯರೊಂದಿಗೆ ದೋಣಿಗಳಲ್ಲಿ ಮೀನುಗಾರಿಕೆಗೆ ಹೋಗುತ್ತಿದ್ದೆ. ನಾನು ಕೆಲಸಕ್ಕೆ ಸೇರಿದ ನಂತರ, ಶಿಕ್ಷಕರಿಗಾಗಿ ಆಯೋಜಿಸಲಾದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ, ನನ್ನ ಕೌಶಲ್ಯವನ್ನು ನನ್ನ ಶಿಕ್ಷಕ ಬಿ.ಕೆ. ನಾಯಕ್ ಗಮನಿಸಿದರು, “ಎಂದು ಅವರು ಹೇಳಿದರು.