ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿಯ ಆರ್ಭಟ ಹೆಚ್ಚಾಗುತ್ತಲೇ ಇದೆ. ಸರ್ಕಾರ ಏನೇ ಕ್ರಮ ಕೈಗೊಂಡರೂ ಪ್ರತಿ ನಿತ್ಯ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಪ್ರತಿ ನಿತ್ಯ 5 ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದರ ಮಧ್ಯೆ ಸೋಂಕು ಕಡಿಮೆ ಮಾಡಲು ಮಂಡ್ಯ ವೈದ್ಯರೊಬ್ಬರು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಹೌದು, ಡಾ. ಪ್ರಶಾಂತ್ ಈಶ್ವರ್ ಎಂಬ ಮಂಡ್ಯದ ವೈದ್ಯ ಕೊರೊನಾ ಹೊಡೆದೋಡಿಸಲು ಹೊಸ ಪ್ರಯತ್ನ ಮಾಡುತ್ತಿದ್ದಾರೆ. ರೋಗಿಗಳನ್ನು ತಪಾಸಣೆ ಮಾಡುವ ಕೊಠಡಿಗೆ ಪ್ರತಿನಿತ್ಯ ನಿಗದಿತ ಪ್ರಮಾಣದಲ್ಲಿ ನೀರಿನೊಂದಿಗೆ ಸೋಡಿಯಂ ಹೈಪೋಕ್ಲೋರೈಟ್ ರಾಸಾಯನಿಕ ಬಳಸಿ ಸ್ಯಾನಿಟೇಜ್ ಸ್ಪ್ರೇ ಮಾಡಿಸಲಾಗುತ್ತಿದೆ. ಇದರಿಂದ ಕೊರೊನಾ ಪ್ರಾಥಮಿಕ ಲಕ್ಷಣಗಳನ್ನು ಹೋಗಲಾಡಿಸಬಹುದು ಎಂಬುದು ಇವರ ಅಭಿಪ್ರಾಯ.
ಇಲ್ಲಿಗೆ ಬಂದ ಅದೆಷ್ಟೋ ರೋಗಿಗಳು ಕೂಡ ಇದರಿಂದ ಕೆಮ್ಮ, ಗಂಟಲು ಕೆರೆತ ನಿವಾರಣೆಯಾಗಿದೆ ಎಂದು ಹೇಳಿದ್ದಾರಂತೆ. ಇದನ್ನು ಸರ್ಕಾರ ಮತ್ತಷ್ಟು ಸಂಶೋಧನೆ ನಡೆಸಿ ಸೋಂಕಿತರಿಗೆ ನೀಡುವುದರಿಂದ ಕೊರೊನಾಗೆ ಕಡಿವಾಣ ಹಾಕಬಹುದು ಎಂದು ಹೇಳುತ್ತಿದ್ದಾರೆ ಈ ವೈದ್ಯ.