alex Certify ರಾತ್ರಿ ನಿದ್ದೆ ಮಾತ್ರೆ ಕೊಟ್ಟು ಹರೆಯದ ಮಗಳ ಮಗ್ಗುಲಲ್ಲೇ ಮಲಗಿದ ತಂದೆ, ನೀಚ ಕೃತ್ಯಕ್ಕೆ ತಾಯಿಯ ಸಾಥ್..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ನಿದ್ದೆ ಮಾತ್ರೆ ಕೊಟ್ಟು ಹರೆಯದ ಮಗಳ ಮಗ್ಗುಲಲ್ಲೇ ಮಲಗಿದ ತಂದೆ, ನೀಚ ಕೃತ್ಯಕ್ಕೆ ತಾಯಿಯ ಸಾಥ್..?

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬ ನಿದ್ದೆ ಮಾತ್ರೆ ಕೊಟ್ಟು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತಂದೆಯ ಈ ನೀಚ ಕೃತ್ಯಕ್ಕೆ ಯುವತಿಯ ಮಲತಾಯಿ ಸಹಕಾರ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಮಲತಾಯಿ ತನಗೆ ನೆರವಾಗಲು ನಿರಾಕರಿಸಿದ ನಂತರ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಕೆಮ್ಮು, ಶೀತ ಆಗಿದೆ ಎಂದು ನಿದ್ದೆ ಮಾತ್ರೆಗಳನ್ನು ತಂದಿದ್ದ 40 ವರ್ಷದ ವ್ಯಕ್ತಿ ತನ್ನ 19 ವರ್ಷದ ಮಗಳಿಗೆ ಅವುಗಳನ್ನು ಕೊಟ್ಟಿದ್ದಾನೆ. ಜೂನ್ 23 ರ ರಾತ್ರಿ ಬೆಂಗಳೂರಿನ ಹರಲೂರಿನಲ್ಲಿರುವ ಮನೆಯಲ್ಲಿ ಅತ್ಯಾಚಾರ ಎಸಗಿದ್ದಾನೆ.

ತಂದೆಯ ಕೃತ್ಯದಿಂದ ನಲುಗಿ ಹೋದ ಯುವತಿ ಪೊಲೀಸರಿಗೆ ದೂರು ನೀಡಲು ಮಲತಾಯಿಯ ನೆರವು ಕೇಳಿದ್ದಾಳೆ. ಆದರೆ ಆಕೆ ಸಹಾಯ ಮಾಡಲು ನಿರಾಕರಿಸಿದ ಕಾರಣ ಶೌಚಾಲಯ ಕ್ಲೀನ್ ಮಾಡುವ ರಾಸಾಯನಿಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಕೆಯೇ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಯುವತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಆಕೆ ನೀಡಿದ ದೂರಿನ ಮೇರೆಗೆ ಆರೋಪಿ ತಂದೆಯನ್ನು ಬಂಧಿಸಲಾಗಿದೆ. ಮಲತಾಯಿಯ ಪಾತ್ರದ ಕುರಿತಾಗಿ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...