
37 ಸೆಕೆಂಡ್ಗಳ ವಿಡಿಯೋದಲ್ಲಿ ಇಬ್ಬರು ಉರಗ ತಜ್ಞರು ಶಿವಮೊಗ್ಗದ ನದಿಯೊಂದರಲ್ಲಿ ಕಾಳಿಂಗ ಸರ್ಪವನ್ನ ಹಿಡಿಯಲು ಯತ್ನಿಸುತ್ತಿರುತ್ತಾರೆ. ಓರ್ವ ಉರಗ ತಜ್ಞ ಕಾಳಿಂಗ ಸರ್ಪದ ಬಾಲವನ್ನ ಹಿಡಿದುಕೊಳ್ತಾರೆ.
ಅಷ್ಟರಲ್ಲಾಗಲೇ ಸಿಟ್ಟಿಗೆದ್ದಿದ್ದ ಸರ್ಪ, ಉರಗ ತಜ್ಞನ ಮೇಲೆ ದಾಳಿ ಮಾಡಲು ಯತ್ನಿಸುತ್ತೆ. ಇದರಿಂದ ಬಚಾವಾಗೋಕೆ ಹೋದ ಉರಗತಜ್ಞ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಆತನ ಜೊತೆಗಿದ್ದ ಮತ್ತೊಬ್ಬ ಕಾಳಿಂಗ ಸರ್ಪದ ದಾಳಿಯಿಂದ ತನ್ನ ಸಹವರ್ತಿಯನ್ನ ರಕ್ಷಿಸಿದ್ದಾರೆ.