ಕಲಬುರಗಿ: ಕೊರೋನಾ ವೈರಸ್ (ಕೋವಿಡ್-19) ತಡೆಯಲು ಲಾಕ್ಡೌನ್ ಜಾರಿ ಮಾಡಿದ ಹಿಲ್ನೆಲೆಯಲ್ಲಿ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಕಲಬುರಗಿ ಜಿಲ್ಲೆಯ 7,845 ಫಲಾನುಭವಿಗಳಿಗೆ 2020ರ ಏಪ್ರಿಲ್ ನಿಂದ ಜಾರಿಗೆ ಬರುವಂತೆ (ಮುಂದಿನ 3 ತಿಂಗಳವರೆಗೆ) ಪ್ರತಿ ತಿಂಗಳಿಗೆ ಒಂದರಂತೆ ಮೂರು ರಿಫಿಲ್ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲು ಈಗಾಗಲೇ (2020 ರ ಏಪ್ರಿಲ್ 22 ರಂದು) ಸರ್ಕಾರವು ಆದೇಶ ಹೊರಡಿಸಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿಯ 7845 ಫಲಾನುಭವಿಗಳಿಂದ ಹಿಂದೆ ಸಂಗ್ರಹಿಸಿದ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ಮಾಹಿತಿಯನ್ನು ಆಹಾರ ನಿರೀಕ್ಷಕರ ಲಾಗಿನ್ ನಲ್ಲಿ ಈಗಾಗಲೇ ಲಭ್ಯವಿದೆ. ಫಲಾನುಭವಿಗಳ ಮಾಹಿತಿ ತಪ್ಪಾಗಿದ್ದಲ್ಲಿ ಹಾಗೂ ತಿದ್ದುಪಡಿಯಾಗಬೇಕಾದ್ದಲ್ಲಿ ಅಂತಹ ಫಲಾನುಭವಿಗಳು ಆಯಾ ತಾಲೂಕಿನ ತಹಸೀಲ್ದಾರರ ಕಚೇರಿಯ ಆಹಾರ ಶಾಖೆಗೆ ಭೇಟಿ ನೀಡಿ 2020ರ ಜೂನ್ 14 ರೊಳಗಾಗಿ ತಮ್ಮ ಸರಿಯಾದ ಮಾಹಿತಿಯನ್ನು ಆಹಾರ ನಿರೀಕ್ಷಕರಿಗೆ ನೀಡಿ ತಿದ್ದುಪಡಿ ಮಾಡಿಸಿಕೊಳ್ಳಬೇಕು. ಫಲಾನುಭವಿಗಳು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಆಹಾರ ಶಿರಸ್ತೇದಾರ/ಆಹಾರ ನಿರೀಕ್ಷಕರ ಕೆಳಕಂಡ ಮೊಬೈಲ್ ನಂಬರ್‍ಗಳಿಗೆ ಸಂಪರ್ಕಿಸಬಹುದಾಗಿದೆ.
ತಾಲೂಕು ಹಾಗೂ ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ. ಅಫಜಲಪುರ ತಾಲೂಕು-ಮೊಬೈಲ್ ಸಂಖ್ಯೆ 9448754630, 9972898112. ಆಳಂದ ತಾಲೂಕು: ಮೊಬೈಲ್ ಸಂಖ್ಯೆ 9538926999, 9741168538. ಚಿಂಚೋಳಿ ತಾಲೂಕು: ಮೊಬೈಲ್ ಸಂಖ್ಯೆ 9901333195, 9741135727. ಚಿತ್ತಾಪೂರ ತಾಲೂಕು: ಮೊಬೈಲ್ ಸಂಖ್ಯೆ 9591668929, 9448554589. ಜೇವರ್ಗಿ ತಾಲೂಕು: ಮೊಬೈಲ್ ಸಂಖ್ಯೆ 9448134228, 9902846295. ಸೇಡಂ ತಾಲೂಕು: ಮೊಬೈಲ್ ಸಂಖ್ಯೆ 9972359755, 9845074767. ಕಲಬುರಗಿ (ಗ್ರಾಮಾಂತರ): ಮೊಬೈಲ್ ಸಂಖ್ಯೆ 9845498779, 9448252028 ಹಾಗೂ ಕಲಬುರಗಿ (ಪಡಿತರ)-ಮೊಬೈಲ್ ಸಂಖ್ಯೆ 8867576591, 9741328123.