alex Certify ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ನಿಗೂಢ ಸಾವು, ಗಂಡನ ಮನೆಯವರಿಂದ ಅನುಮಾನದ ನಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ನಿಗೂಢ ಸಾವು, ಗಂಡನ ಮನೆಯವರಿಂದ ಅನುಮಾನದ ನಡೆ

ಮೈಸೂರು ತಾಲೂಕಿನ ಮೆಲ್ಲಹಳ್ಳಿಯಲ್ಲಿ ಗೃಹಿಣಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪತಿ ಮತ್ತು ಕುಟುಂಬಸ್ಥರ ವಿರುದ್ಧ ಮಂಜುಳಾ(20) ಹತ್ಯೆ ಆರೋಪ ಮಾಡಲಾಗಿದೆ.

ವರದಕ್ಷಿಣೆ ಕಿರುಕುಳ ನೀಡಿ ಮಂಜುಳಾರನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಹೇಮಂತ್ ಮತ್ತು ಮಂಜುಳಾ ಪ್ರೀತಿಸಿ ಮದುವೆಯಾಗಿದ್ದರು. ತವರು ಮನೆಯಿಂದ 2 ಲಕ್ಷ ರೂ. ತರುವಂತೆ ಆಕೆಗೆ ಕಿರುಕುಳ ನೀಡಲಾಗುತ್ತಿತ್ತು. ಮಂಜುಳಾ ತಂದೆ ಹಣ ನೀಡಲು ಒಂದು ತಿಂಗಳು ಸಮಯ ಕೇಳಿದ್ದರು ಎನ್ನಲಾಗಿದೆ.

ಆದರೆ ನಿನ್ನೆ ಮಂಜುಳಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪೋಷಕರಿಗೆ ಸಾವಿನ ಮಾಹಿತಿ ನೀಡದೆ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿದೆ. ಮಂಜುಳಾ ಅಂತ್ಯಸಂಸ್ಕಾರಕ್ಕೆ ಪತಿ ಮನೆಯವರು ಮುಂದಾಗಿರುವ ವಿಷಯ ತಿಳಿದು ಪೊಲೀಸರ ಜೊತೆ ತೆರಳಿದ ಪೋಷಕರು ಅಂತ್ಯಕ್ರಿಯೆಗೆ ತಡೆ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದೆ. ಮಂಜುಳಾ ಅವರ ಪತಿ ಹೇಮಂತ್, ಮಾವ, ಅತ್ತೆ, ಮೈದುನನ ವಿರುದ್ಧ ವರುಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...