
ಬೆಂಗಳೂರು: ನಾಳೆಯಿಂದ ಕರ್ನಾಟಕದಲ್ಲಿ ಬಹುತೇಕ ಚಟುವಟಿಕೆ ರೀ ಓಪನ್ ಆಗಲಿವೆ. ಹೋಟೆಲ್, ದೇವಾಲಯ ಶಾಪಿಂಗ್ ಮಾಲ್ ಆರಂಭವಾಗಲಿವೆ.
ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಉಳಿದ ಕಡೆ ಚಟುವಟಿಕೆಗಳನ್ನು ಆರಂಭಿಸಲು ಅವಕಾಶ ನೀಡಲಾಗಿದೆ. ಜೂನ್ 30 ರವರೆಗೆ ಲಾಕ್ ಡೌನ್ ಮುಂದುವರೆದಿದ್ದರೂ ಹಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ.
ಅದೇ ರೀತಿ ನಾಳೆಯಿಂದ ಹೋಟೆಲ್ಗಳಲ್ಲಿ ಸರ್ವಿಸ್ ಇರುತ್ತದೆ. ಶಾಪಿಂಗ್ ಪ್ರಿಯರಿಗೂ ಸಿಹಿಸುದ್ದಿ ಸಿಕ್ಕಿದೆ. ದೇವರ ದರ್ಶನಕ್ಕೆ ಅವಕಾಶ ಇರುತ್ತದೆ. ಸೋಮವಾರದಿಂದ ಬಹುತೇಕ ಎಲ್ಲಾ ಚಟುವಟಿಕೆಗಳು ಪುನರಾರಂಭಗೊಳ್ಳಲಿದೆ.