alex Certify ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಆನ್ ಲೈನ್ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಆನ್ ಲೈನ್ ಅರ್ಜಿ ಆಹ್ವಾನ

ಶಿವಮೊಗ್ಗ: ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು ಪ್ರಸಕ್ತ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ  ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಇಚ್ಚಿಸುವ ಅರ್ಹ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್ ಮತ್ತು ಛಾಯಾಚಿತ್ರ ಹಾಗೂ ಮತ್ತಿತರೆ ದಾಖಲಾತಿಗಳು ನಿಗಮದ ವೆಬ್‍ಸೈಟ್ kacdc.karnataka.gov.in ಮೂಲಕ ನವೆಂಬರ್ -15 ರೊಳಗಾಗಿ ಸಲ್ಲಿಸುವುದು.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಪಡೆಯಲು ಇಚ್ಛಿಸುವವರು 18-45 ವರ್ಷ ವಯೋ ಮಿತಿಯೊಳಗಿನವರಾಗಿದ್ದು, ಸಣ್ಣ ವ್ಯಾಪಾರ, ಸ್ವಯಂ ಉದ್ಯೋಗ ಇತ್ಯಾದಿ ವ್ಯಾಪಾರ ಚಟುವಟಿಕೆಗಳಿಗೆ ಸಾಲ ನೀಡಲಾಗುವುದು.  ಅರ್ಜಿದಾರರ ವಾರ್ಷಿಕ ವರಮಾನ 3 ಲಕ್ಷ ರೂ. ಮಿತಿಯಲ್ಲಿರಬೇಕು. ಅರಿವು ಶೈಕ್ಷಣಿಕ ಸಾಲ ಯೋಜನೆ ಪಡೆಯಲು ಇಚ್ಛಿಸುವವರು ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಇತ್ಯಾದಿ ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಸಿಇಟಿ/ನೀಟ್ ಮೂಲಕ ಆಯ್ಕೆಯಾಗಿ ಮತ್ತು ವೃತ್ತಿಪರ ಪಿ.ಹೆಚ್.ಡಿ, ಕೋರ್ಡ್‍ಗಳಲ್ಲಿ ವ್ಯಾಸಂಗ ಮಾಡುವವರಾಗಿದ್ದು, ವಾರ್ಷಿಕ ವರಮಾನ 6 ಲಕ್ಷ ರೂ. ಮಿತಿಯಲ್ಲಿರುಬೇಕು.  18 ರಿಂದ 35 ವರ್ಷ ವಯೋಮಿತಿಯೊಳಗಿರಬೇಕು.

ಮಹಿಳೆಯರಿಗೆ ಶೇ.33 ರಷ್ಟು ಹಾಗೂ ವಿಶೇಷಚೇತನರಿಗೆ ಶೇ. 5 ರಷ್ಟು ಮೀಸಲಾತಿ ಇರುತ್ತದೆ. ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ, ಅಶ್ವಿನ್ ನಿವಾಸ, ‘ಎ’ ಬ್ಲಾಕ್, 2ನೇ ಪ್ಲಾರಲಲ್ ರಸ್ತೆ, ಗಾಂಧಿನಗರ, ಶಿವಮೊಗ್ಗ ಕಚೇರಿ, ದೂರವಾಣಿ ಸಂಖ್ಯೆ 08182-229634/ ಸಹಾಯವಾಣಿ: 9448451111 /18005998844 ಗಳನ್ನು ಅಥವಾ kacdc.karnataka.gov.in Email- support.kacdc@karnataka.gov.in ನ್ನು ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...