alex Certify ಮನೆ ಬಾಗಿಲಿಗೆ ಬಂದ ಅಧಿಕಾರಿಗಳಿಗೆ ಅತ್ಯಾಚಾರದ ದೂರು ನೀಡುವ ಬೆದರಿಕೆ ಹಾಕಿದ ಮಹಿಳೆಯ ವಿರುದ್ಧ ಕೇಸ್ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಬಾಗಿಲಿಗೆ ಬಂದ ಅಧಿಕಾರಿಗಳಿಗೆ ಅತ್ಯಾಚಾರದ ದೂರು ನೀಡುವ ಬೆದರಿಕೆ ಹಾಕಿದ ಮಹಿಳೆಯ ವಿರುದ್ಧ ಕೇಸ್ ದಾಖಲು

ಬೆಂಗಳೂರು: ಬ್ಯಾಂಕ್ ಲೋನ್ ಪಾವತಿಸುವಂತೆ ತಿಳಿಸಲು ಮನೆಗೆ ಬಂದ ಅಧಿಕಾರಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದ ಮಹಿಳೆ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ಆರ್ಯ ಅವರು ಬೆದರಿಕೆ ಹಾಕಿದ ಮಹಿಳೆ ವಿರುದ್ಧ ದೂರು ನೀಡಿದ್ದಾರೆ. ಮಹಿಳೆ ಲೋನ್ ಕಟ್ಟುವಂತೆ ಮನೆ ಬಾಗಿಲಿಗೆ ತಿಳಿಸಲು ಬಂದಿದ್ದ ಅಧಿಕಾರಿಗಳನ್ನು ಅವಾಚ್ಯ ಪದಗಳಿಂದ ನಿಂದಿಸಿ ಅತ್ಯಾಚಾರದ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು.

ಆಕೆ ಕಾನೂನಿನ ದುರ್ಬಳಕೆ ಮತ್ತು ಮಹಿಳಾ ಹಕ್ಕು ದುರ್ಬಳಕೆ ಮಾಡಿಕೊಂಡಿದ್ದು ಅವರ ವಿರುದ್ಧ ಕ್ರಮ ಜರುಗಿಸುವಂತೆ ದೂರು ನೀಡಲಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧಿತನಾಗಿರುವ ರಾಹುಲ್ ಗೆ ಬೆದರಿಕೆ ಹಾಕಿದ ಮಹಿಳೆ ಆಪ್ತರಾಗಿದ್ದಾರೆ. ಬ್ಯಾಂಕ್ ನಿಂದ ಪಡೆದುಕೊಂಡಿದ್ದ ಸಾಲದ ಕಂತು ಪಾವತಿಸಿಲ್ಲ. ಹೀಗಾಗಿ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ಲೋನ್ ಕಟ್ಟುವಂತೆ ತಿಳಿಸಿದ ವೇಳೆ ಮಹಿಳೆ ಬೆದರಿಕೆ ಹಾಕಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...