alex Certify ಇಂದು ರಾತ್ರಿಯಿಂದಲೇ ಸಿಗಲ್ಲ ಮದ್ಯ, ಸೋಮವಾರ ಬೆಳಗ್ಗೆವರೆಗೆ ಎಣ್ಣೆ ಅಂಗಡಿ ಬಂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ರಾತ್ರಿಯಿಂದಲೇ ಸಿಗಲ್ಲ ಮದ್ಯ, ಸೋಮವಾರ ಬೆಳಗ್ಗೆವರೆಗೆ ಎಣ್ಣೆ ಅಂಗಡಿ ಬಂದ್

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ಪ್ರತಿದಿನ ರಾತ್ರಿ ಕರ್ಫ್ಯೂ, ಪ್ರತಿ ಭಾನುವಾರ ಲಾಕ್ಡೌನ್ ಜಾರಿ ಮಾಡಲಾಗಿದೆ.

ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುತ್ತದೆ. ಅಗತ್ಯ ವಸ್ತು ಮತ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆ ನಿರ್ಬಂಧಿಸಲಾಗುವುದು.

ರಾಜ್ಯಾದ್ಯಂತ ಇಂದು ರಾತ್ರಿಯಿಂದ ಮದ್ಯದಂಗಡಿಗಳು ಬಂದ್ ಆಗಲಿವೆ 33 ಗಂಟೆಗಳ ಕಾಲ ಮದ್ಯದಂಗಡಿಗಳು ಬಂದ್ ಆಗಲಿದ್ದು, ಮದ್ಯಪ್ರಿಯರು ಸಂಡೇ ಸ್ಪೆಷಲ್ ಮನೆಯಲ್ಲೇ ಕಳೆಯಲು ಇಂದು ಸಂಜೆಯೊಳಗೆ ಮದ್ಯ ಖರೀದಿಸಬೇಕಿದೆ.

ಶನಿವಾರ ಮತ್ತು ಭಾನುವಾರ ಲಾಕ್ಡೌನ್ ಜಾರಿ ಹಿನ್ನೆಲೆಯಲ್ಲಿ ಇಂದು ಗಂಟೆಯಿಂದ ಮದ್ಯ ಸಿಗುವುದಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಂಎಸ್ಐಎಲ್, ಎಂ.ಆರ್.ಪಿ. ಔಟ್ಲೆಟ್ ಗಳನ್ನು ಬಂದ್ ಮಾಡಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...