ಕೊರೊನಾದಿಂದಾಗಿ ಅನೇಕ ಉದ್ಯಮಗಳು ಹಾಗೂ ಕಂಪನಿಗಳು ತಮ್ಮ ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಹಾಗೂ ಅರ್ಧದಷ್ಟು ನೌಕರರು ಮಾತ್ರ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿವೆ. ಇದರ ಜೊತೆಗೆ ಅನೇಕ ಸಂಸ್ಥೆಗಳು ಗ್ರಾಹಕರಿಗೆ ಆನ್‌ಲೈನ್ ಮೂಲಕ ತಮ್ಮ ತಮ್ಮ ಕೆಲಸ ಅಥವಾ ಸೇವೆಗಳನ್ನು ಪಡೆದುಕೊಳ್ಳುವಂತೆ ಸೂಚಿಸಿವೆ. ಇದೀಗ ಎಲ್‌ಐಸಿ ಸಂಸ್ಥೆ ಕೂಡ ತನ್ನ ಗ್ರಾಹಕರಿಗೊಂದು ಸೌಲಭ್ಯ ನೀಡಿದೆ.
ಹೌದು, ಕೊರೊನಾ ಸಮಯವನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಮೆಚುರಿಟಿ ಕ್ಲೈಮ್ ಪಡೆಯಲು ಗ್ರಾಹಕರು ಶಾಖೆಗೆ ಬರಬೇಕಾಗಿಲ್ಲ. ಮನೆಯಲ್ಲಿಯೇ ಕೂತು ಇದನ್ನು ಪಡೆಯಬಹುದು ಎಂದು ಎಲ್‌ಐಸಿ ತಿಳಿಸಿದೆ.
ಗ್ರಾಹಕರು ಮನೆಯಲ್ಲಿಯೇ ಇದ್ದು ಅರ್ಜಿ ಸಲ್ಲಿಸುವ ಮೂಲಕ ಈ ಸೇವೆಯನ್ನು ಪಡೆಯಬಹುದು. ಇನ್ನು ತಿದ್ದುಪಡಿ ಅಥವಾ ನವೀಕರಣಕ್ಕೆ ಆಯಾಯ ಶಾಖೆಗೆ ಹೋಗಬಹುದು. ಜೂನ್ 30ರವರೆಗೆ ಸಮಯಾವಕಾಶವನ್ನು ನೀಡಲಾಗಿದೆ. ಪಾಲಿಸಿ ತೆಗೆದುಕೊಳ್ಳುವ ಹಿರಿಯ ನಾಗರೀಕರು ಖಾತೆ ಮಾಹಿತಿಯನ್ನು ನೀಡಬೇಕು ಎಂದು ಎಲ್‌ಐಸಿ ಸಂಸ್ಥೆ ಹೇಳಿದೆ.