ಹುಬ್ಬಳ್ಳಿ: ಹವಾಮಾನ ವೈಪರೀತ್ಯದಿಂದಾಗಿ ಸಂಸದ ಅನಂತಕುಮಾರ್ ಹೆಗ್ಡೆ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ಸಮಸ್ಯೆಯಾಗಿದ್ದು ಸುಮಾರು ಒಂದು ಗಂಟೆ ಬಳಿಕ ಇಂಡಿಯಾ ವಿಮಾನ ಸೇಫಾಗಿ ಲ್ಯಾಂಡಿಂಗ್ ಆಗಿದೆ.
ಎಟಿಸಿ ಅನುಮತಿ ಸಿಗದ ಹಿನ್ನೆಲೆಯಲ್ಲಿ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಹಲವು ಪ್ರಯಾಣಿಕರಿದ್ದ ವಿಮಾನ ಲ್ಯಾಂಡ್ ಆಗಿರಲಿಲ್ಲ. ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿದ್ದ ಇಂಡಿಗೋ ವಿಮಾನ ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡಿಂಗ್ ಆಗಿರಲಿಲ್ಲ. ಒಂದು ಗಂಟೆ ಹಾರಾಟ ನಡೆಸಿದ ನಂತರ ವಿಮಾನ ಕೊನೆಗೂ ಸೇಫಾಗಿ ಲ್ಯಾಂಡಿಂಗ್ ಆಗಿದೆ.
ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುತ್ತಿದ್ದ ಕಾರಣ ಲ್ಯಾಂಡಿಂಗ್ ಗೆ ಅವಕಾಶ ಸಿಕ್ಕಿರಲಿಲ್ಲ. 6 ಬಾರಿ ಲ್ಯಾಂಡಿಂಗ್ ಗೆ ಪೈಲಟ್ ಪ್ರಯತ್ನ ನಡೆಸಿ ವಿಫಲರಾಗಿದ್ದಾರೆ. ಬೆಳಗ್ಗೆ 9.45 ರಿಂದ ಲ್ಯಾಂಡಿಂಗ್ ಸಾಧ್ಯವಾಗದೇ ಹಾರಾಟ ನಡೆಸಿದ್ದ ವಿಮಾನ ಕೊನೆಗೂ ಸೇಫಾಗಿ ಲ್ಯಾಂಡ್ ಆಗಿದೆ ಎನ್ನಲಾಗಿದೆ.