ಬೆಂಗಳೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಅಧಿಕೃತವಾಗಿ ಇಂದಿನಿಂದ ಜಾರಿಗೆ ಬಂದಿದ್ದು ರೈತರಲ್ಲದವರು ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿ ಕೃಷಿ ಜಮೀನು ಖರೀದಿಸಲು ಜಾರಿಯಲ್ಲಿದ್ದ ನಿರ್ಬಂಧಗಳನ್ನು ತೆಗೆದುಹಾಕಿದ್ದು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಇಂದಿನಿಂದ ಜಾರಿಗೆ ಬರಲಿದೆ. ಇನ್ನು ಮುಂದೆ ಕೃಷಿಕರಲ್ಲದವರು ಕೂಡ ಕೃಷಿಭೂಮಿ ಖರೀದಿಸಬಹುದಾಗಿದೆ.
ಕೃಷಿ ಕುಟುಂಬದ ಹಿನ್ನೆಲೆ ಹೊಂದಿರುವವರು, ಎಷ್ಟೇ ಆದಾಯ ಹೊಂದಿದವರು ಸಹ ಕೃಷಿಭೂಮಿ ಖರೀದಿಸಬಹುದು. ವ್ಯಕ್ತಿ ಮತ್ತು ಕುಟುಂಬದವರು ಹೊಂದಿರಬಹುದಾದ ಭೂಮಿಯ ಮಿತಿ ಕೂಡ ದುಪ್ಪಟ್ಟಾಗಿದೆ. ಈ ಕುರಿತಾಗಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಎಲ್ಲಾ ಸಬ್ ರಿಜಿಸ್ಟರ್ ಕಚೇರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಕುಟುಂಬವೊಂದಕ್ಕೆ ಗರಿಷ್ಠ 216 ಎಕರೆ ಜಮೀನು ಹೊಂದಬಹುದಾಗಿದೆ ಎಂದು ಹೇಳಲಾಗಿದೆ.