
ಬೆಂಗಳೂರು: ಲಾಕ್ಡೌನ್ ಸಡಿಲಿಕೆ ನಂತರ ರಾಜ್ಯದಲ್ಲಿ ಸಂಚಾರ ಆರಂಭಿಸಿರುವ ಕೆಎಸ್ಆರ್ಟಿಸಿ ಜೂನ್ 17 ರಿಂದ ಆಂಧ್ರಪ್ರದೇಶದ ವಿವಿಧ ನಗರಗಳಿಗೆ ಸೇವೆ ನೀಡಲಿದೆ.
ನಾಳೆಯಿಂದ ಆರಂಭಿಕ ಹಂತದಲ್ಲಿ ಬೆಂಗಳೂರು, ಬಳ್ಳಾರಿ, ರಾಯಚೂರು, ಶಹಾಪುರದಿಂದ ಆಂಧ್ರಪ್ರದೇಶಕ್ಕೆ ಬಸ್ ಗಳು ತೆರಳಲಿವೆ. ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಿಗೂ ಸೇವೆ ನೀಡಲಾಗುವುದು.
ಬೆಂಗಳೂರಿನಿಂದ ಅನಂತಪುರ, ಹಿಂದೂಪುರ, ಪುಟ್ಟಪರ್ತಿ, ಕಡಪ, ತಿರುಪತಿ, ಮದನಪಲ್ಲಿ, ವಿಜಯವಾಡ, ನೆಲ್ಲೂರು, ಮಂತ್ರಾಲಯ, ರಾಯದುರ್ಗ ಮೊದಲಾದ ಕಡೆಗಳಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಲಿದೆ ಎಂದು ಹೇಳಲಾಗಿದೆ.