
ಬೆಂಗಳೂರು: ಲಾಕ್ ಡೌನ್ ಸಡಿಲಿಕೆಯಾದ ನಂತರ ಕೆಎಸ್ಸಾರ್ಟಿಸಿ ಬಸ್ ಸಂಚಾರ ಪುನಾರಂಭವಾಗಿದೆ. 5 ರಾಜ್ಯಗಳಿಗೆ ಸೇವೆ ಆರಂಭಿಸಲಾಗಿದ್ದು, ಪ್ರತಿದಿನ 300 ಬಸ್ ಸಂಚರಿಸುತ್ತಿವೆ.
ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ಮತ್ತು ಕೇರಳ ರಾಜ್ಯಗಳಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಿದ್ದು, ತಮಿಳುನಾಡು ಮತ್ತು ಪಾಂಡಿಚೇರಿಗೆ ನವೆಂಬರ್ ವೇಳೆಗೆ ಅನುಮತಿ ಸಿಗುವ ನಿರೀಕ್ಷೆಯಿದೆ.
ಕೆಎಸ್ಆರ್ಟಿಸಿಯಿಂದ ಬಸ್ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಮಾಡಿದ ಮನವಿಗೆ 5 ರಾಜ್ಯಗಳು ಒಪ್ಪಿದ್ದು ಈ ಹಿನ್ನೆಲೆಯಲ್ಲಿ ಸಂಚಾರ ಆರಂಭಿಸಲಾಗಿದೆ. 7 ರಾಜ್ಯಗಳಿಗೆ 1070 ಬಸ್ ಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಈಗ 5 ರಾಜ್ಯಗಳಿಗೆ ಪ್ರತಿದಿನ 300 ಬಸ್ ಗಳು ಸಂಚರಿಸುತ್ತಿವೆ ಎಂದು ಹೇಳಲಾಗಿದೆ.