ಮಹಾಮಾರಿ ಕೊರೊನಾ ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ್ದ ಕಾರಣ ಆ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈಗ ಲಾಕ್ಡೌನ್ ಸಡಿಲಿಕೆಯಾದರೂ ಕೊರೊನಾ ಭಯದಿಂದಾಗಿ ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸಲು ಜನತೆ ಹಿಂದೇಟು ಹಾಕುತ್ತಿದ್ದಾರೆ.
ಹೀಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ಸುಗಳು ಸಂಚಾರ ಆರಂಭಿಸಿದರೂ ಸಹ ಪ್ರಯಾಣಿಕರಿಲ್ಲದೆ ನಷ್ಟದ ಹಾದಿ ಹಿಡಿದಿವೆ. ಈ ಕಾರಣಕ್ಕೆ ನೌಕರರ ವಿವಿಧ ಸವಲತ್ತುಗಳನ್ನು ಕೆಎಸ್ಆರ್ಟಿಸಿ ಕಡಿತ ಮಾಡಿಕೊಂಡು ಬರುತ್ತಿದ್ದು, ಇದೀಗ ಮತ್ತೊಂದು ಸವಲತ್ತಿಗೆ ಕತ್ತರಿ ಹಾಕಲು ಮುಂದಾಗಿದೆ.
ಸಾರಿಗೆ ಇಲಾಖೆ ನೌಕರರ 2020 ಜನವರಿ ಹಾಗೂ ಜೂನ್ ಮತ್ತು 2021ರ ಜನವರಿಯಲ್ಲಿ ಹೆಚ್ಚಳ ಮಾಡಬೇಕಿದ್ದ ತುಟ್ಟಿಭತ್ಯೆ ದರ ತಡೆಹಿಡಿಯಲಾಗಿದ್ದು, 2019ರ ಜೂನ್ ನಲ್ಲಿ ಜಾರಿಯಾದ ತುಟ್ಟಿ ಭತ್ಯೆ ದರವನ್ನು ಪಾವತಿಸಲು ತೀರ್ಮಾನಿಸಲಾಗಿದೆ.