ಹಾಸನ: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಸ್ವಾಮೀಜಿ ಮತ್ತೊಂದು ಆಘಾತಕಾರಿ ಭವಿಷ್ಯ ಹೇಳಿದ್ದು, ಕೊರೊನಾ ಸೋಂಕು ಅಧಿಕಾರಸ್ಥರನ್ನು ಬಲಿ ಪಡೆಯಲಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕೋಡಿಮಠದಲ್ಲಿ ಮಾತನಾಡಿದ ಶಿವಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ರಾಜರಿಗೆ ತೊಂದರೆಯಾಗುತ್ತದೆ. ನೋವು ಕಾಯಿಲೆ ಅವಮಾನ ರಾಜಭೀತಿ ಉಂಟಾಗುತ್ತದೆ. ಜಾಗತಿಕ ಮಟ್ಟದಲ್ಲಿ ರಾಜರಿಗೆ, ಅಧಿಕಾರಸ್ಥರು ಬಲಿಯಾಗಲಿದ್ದಾರೆ. ಕಾರ್ಮೋಡದ ನಡುವೆ ಮಿಂಚು ಬರುವಂತೆ ಮುಂದಿನ ದಿನಗಳಲ್ಲಿ ಒಳ್ಳೆಯ ವಿಚಾರಗಳನ್ನು ಕೊರೊನಾ ಸೋಂಕು ಕಲಿಸುತ್ತದೆ ಎಂದು ತಿಳಿಸಿದ್ದಾರೆ.
ದೇವಾಲಯದ ಬಾಗಿಲು ಬಂದ್ ಮಾಡಿ ಮದ್ಯದಂಗಡಿ ತೆರೆಯಲು ಬಿಟ್ಟಿರುವುದು ಸರಿಯಲ್ಲ. ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ಪರಿಣಾಮದಿಂದ ಮುಂದಿನ ದಿನಗಳಲ್ಲಿ ಅತಿಯಾದ ಮಳೆಯಾಗುವುದು, ಭೂಮಿ ನಡುಗುವುದು. ಜಾಗತಿಕ ಮಟ್ಟದಲ್ಲಿ ರಾಜಕೀಯ ಭೀತಿ ಉಂಟಾಗಬಹುದು. ರಾಜರು ಅವಮಾನ ಅನುಭವಿಸಬೇಕಾಗುತ್ತದೆ. ನಿಯಮ ಪಾಲನೆ, ಸ್ವಚ್ಛತೆಯಿಂದ ಒಳ್ಳೆಯದಾಗುತ್ತದೆ. ಮುಂದಿನ 2 -3 ತಿಂಗಳಲ್ಲಿ ಕೊರೋನಾ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.