alex Certify ಶೀಲ ಶಂಕಿಸಿ ಕಿರುಕುಳ: ಸಂಬಂಧಿಕರೊಂದಿಗೆ ಸೇರಿ ಗಂಡನ ಕೊಂದು ಹೊಲದಲ್ಲಿ ಹೂತಿಟ್ಟ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೀಲ ಶಂಕಿಸಿ ಕಿರುಕುಳ: ಸಂಬಂಧಿಕರೊಂದಿಗೆ ಸೇರಿ ಗಂಡನ ಕೊಂದು ಹೊಲದಲ್ಲಿ ಹೂತಿಟ್ಟ ಪತ್ನಿ

ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಮಹಿಳೆಯೊಬ್ಬಳು ಗಂಡನನ್ನೇ ಕೊಲೆ ಮಾಡಿದ್ದಾಳೆ. ಮಹಿಳೆಯ ಕೃತ್ಯಕ್ಕೆ ಸಹೋದರ, ಸಹೋದರಿ ಹಾಗೂ ಮತ್ತಿಬ್ಬರು ಇದಕ್ಕೆ ಸಹಕಾರ ನೀಡಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನ ನೇರ್ಲೆ ಗ್ರಾಮದ ಸಚಿನ್(35) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಅನಿತಾ(35), ಆಕೆಯ ಸಹೋದರ ಹಂಚಿನಾಳ ಗ್ರಾಮದ ಪಿಂಟು, ಸಹೋದರಿ ವನಿತಾ, ಹುನ್ನರಗಿ ಗ್ರಾಮದ ಗಣೇಶ್ ಆರೋಪಿಗಳಾಗಿದ್ದು ಇವರೆಲ್ಲರೂ ನಾಪತ್ತೆಯಾಗಿದ್ದಾರೆ.

ಸಚಿನ್ ಪತ್ನಿಯ ಶೀಲ ಶಂಕಿಸಿ ಜಗಳವಾಡುತ್ತಿದ್ದ. ಇದರಿಂದ ರೋಸಿ ಹೋಗಿದ್ದ ಪತ್ನಿ ಸೆಪ್ಟೆಂಬರ್ 3ರಂದು ರಾತ್ರಿ ಹಂಚಿನಾಳ ಗ್ರಾಮಕ್ಕೆ ಬಂದಿದ್ದ ವೇಳೆಯಲ್ಲಿ ತನ್ನವರೊಂದಿಗೆ ಸೇರಿ ಗಂಡನ ತಲೆಗೆ ಹೊಡೆದು ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಹೊಲದಲ್ಲಿ ಹೂತುಹಾಕಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...