ಶಿವಮೊಗ್ಗ: ಜಿಲ್ಲಾ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ(ಪಿಎಂಇಜಿಪಿ) ಯೋಜನೆಯಡಿ ಬ್ಯಾಂಕುಗಳಿಂದ ಸಾಲ ಪಡೆದು ಹೊಸದಾಗಿ ಉತ್ಪಾದನಾ ಮತ್ತು ಸೇವಾ ಚಟುವಟಿಕೆಗಳನ್ನು ಪ್ರಾರಂಭಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಿದೆ.
ಕೇಂದ್ರ ಸರ್ಕಾರದಿಂದ ಗ್ರಾಮೀಣ ಪ್ರದೇಶದಲ್ಲಿ 25% ರಿಂದ 35% ವರೆಗೆ ಮತ್ತು ನಗರ ಪ್ರದೇಶದಲ್ಲಿ 15% ರಿಂದ 25% ವರೆಗೆ ಸಹಾಯಧನ ನೀಡುತ್ತಿದ್ದು, ಈ ಯೋಜನೆಯಡಿ ಸೇವಾ ಚಟುವಟಿಕೆಗಳಿಗೆ ರೂ. 10 ಲಕ್ಷ ಮತ್ತು ಉತ್ಪಾದನಾ ಚಟುವಟಿಕೆಗಳಿಗೆ ರೂ. 25 ಲಕ್ಷ ಯೋಜನಾ ವೆಚ್ಚದ ಗರಿಷ್ಠ ಮಿತಿಯೊಂದಿಗೆ ಅವಕಾಶ ಕಲ್ಪಿಸಲಾಗಿದೆ.
ಆಸಕ್ತ ಉದ್ಯಮಶೀಲರು ವೆಬ್‍ಸೈಟ್ www.kviconline -pmegpeportal ರಲ್ಲಿ ಆನ್‍ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗೆ ಜಿಲ್ಲಾ ಅಭಿವೃದ್ಧಿ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಚೇರಿ, ದುರ್ಗಿಗುಡಿ 2ನೇ ತಿರುವು ಶಿವಮೊಗ್ಗ, ದೂ.ಸಂ.: 08182-223273 ಇವರನ್ನು ಸಂಪರ್ಕಿಸುವುದು.